Print 
yash, radhika pandit, gali gali,

User Rating: 5 / 5

Star activeStar activeStar activeStar activeStar active
 
yash dances for gali gali
Yash Dances for Gali Gali with Radhika Pandit

ಕೆಜಿಎಫ್‍ನಲ್ಲಿ ಭರ್ಜರಿ ಸೌಂಡು ಮಾಡಿದ್ದ ಹಾಡು ಗಲೀ ಗಲೀ ಮೇ.. ಕನ್ನಡದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನು ಬಳಸಿದ್ದರೆ, ಹಿಂದಿ ವರ್ಷನ್‍ನಲ್ಲಿ ಗಲಿ ಗಲಿ ಮೇ.. ಹಾಡನ್ನು ಬಳಸಲಾಗಿತ್ತು. ಆ ಹಾಡಿಗೆ ಯಶ್ ಜೊತೆ ಹೆಜ್ಜೆ ಹಾಕಿದ್ದ ಚೆಲುವೆ ಮೌನಿ ರಾಯ್ ಹಾಡಿ ಕುಣಿದಿದ್ದರು. ಈಗ ಅದೇ ಹಾಡಿಗೆ ಯಶ್ ಜೊತೆ ರಾಧಿಕಾ ಪಂಡಿತ್ ಹೆಜ್ಜೆ ಹಾಕಿದ್ದಾರೆ.

2ನೇ ಮಗುವಿಗೆ ತಾಯಿಯಾಗುತ್ತಿರುವ ರಾಧಿಕಾ ಪಂಡಿತ್ ಜೊತೆ ಯಶ್ ಗಲೀ ಗಲೀ ಮೇ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಈಗಲೂ ನಾನು ನಿಮ್ಮೊಂದಿಗೆ ನಿಮ್ಮ ರಿದಂಗೆ ಹೆಜ್ಜೆ ಹಾಕಬಲ್ಲೆ ಎಂದು ಬರೆದುಕೊಂಡಿದ್ದಾರೆ ರಾಧಿಕಾ ಪಂಡಿತ್.