` ನಾನು ಏನ್ ಕೇಳಿದ್ರೂ ನೋ ಎಂದಿಲ್ಲ ಸುದೀಪ್ - ರವಿಚಂದ್ರನ್  - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep will never say no to me says ravichadran
Ravichandran, Sudeep

ಕ್ರೇಜಿಸ್ಟಾರ್ ರವಿಚಂದ್ರನ್, ಕಿಚ್ಚ ಸುದೀಪ್ ಅವರನ್ನು ನನ್ನ ದೊಡ್ಡಮಗ ಎಂದೇ ಪ್ರೀತಿಯಿಂದ ನೋಡುತ್ತಾರೆ. ಗೌರವಿಸುತ್ತಾರೆ. ಅದಕ್ಕೆ ತಕ್ಕಂತೆ ಸುದೀಪ್ ಕೂಡಾ ಅಷ್ಟೇ ಪ್ರೀತಿ, ಗೌರವ ತೋರುತ್ತಾರೆ. ಸುದೀಪ್ ಈಗ ರವಿಚಂದ್ರನ್ ನಿರ್ದೇಶನದ ರವಿ ಬೋಪಣ್ಣ ಸಿನಿಮಾದಲ್ಲಿ ಅತಿಥಿ ನಟರಾಗಿ ನಟಿಸೋದು ಕನ್ಫರ್ಮ್ ಆಗಿದೆ.

ನಾನು ಸುದೀಪ್‍ಗೆ ನನ್ನ ರವಿ ಬೋಪಣ್ಣ ಚಿತ್ರದಲ್ಲಿ ನಟಿಸೋಕೆ ಸಾಧ್ಯನಾ ಎಂದು ಕೇಳಿದೆ. ಅವರು ಕಥೆಯನ್ನೂ ಕೇಳಲಿಲ್ಲ, ಪಾತ್ರ ಏನು ಎಂದೂ ಕೇಳಲಿಲ್ಲ. ಯಾವಾಗ, ಎಲ್ಲಿಗೆ ಬರ್ಬೇಕು ಹೇಳಿ, ಬರ್ತೀನಿ ಅಂದ್ರು. ಅದು ಸುದೀಪ್. ನನ್ನ ಮಾತಿಗೆ ಅವರು ಯಾವತ್ತೂ ಆಗಲ್ಲ ಎಂದಿಲ್ಲ ಎಂದು ಪ್ರೀತಿಯಿಂದ ಹೇಳಿದ್ದಾರೆ ರವಿಚಂದ್ರನ್.

ಈ ಹಿಂದೆ ಸುದೀಪ್‍ಗೆ ಮಾಣಿಕ್ಯದಲ್ಲಿ ತಂದೆಯಾಗಿ, ಹೆಬ್ಬುಲಿಯಲ್ಲಿ ಅಣ್ಣನಾಗಿದ್ದರು ರವಿಚಂದ್ರನ್. ಅಪೂರ್ವ ಚಿತ್ರದಲ್ಲಿಯೂ ಸುದೀಪ್ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದರು. ಇದು 4ನೇ ಬಾರಿ ಒಂದಾಗುತ್ತಿದ್ದಾರೆ.

Shivarjun Movie Gallery

KFCC 75Years Celebrations and Logo Launch Gallery