ಸ್ವಾಭಿಮಾನದ ನಲ್ಲೆ.. ಸಾಕು ಸಂಯಮ ಬಲ್ಲೆ..
ಮೆಲ್ಲುಸಿರೇ ಸವಿಗಾಗ.. ಎದೆ ಝಲ್ಲನೆ ಹೂವಿನ ಬಾಣ..
ವೀರಕೇಸರಿ ಎಂಬ ಶಬ್ಧ ಕಿವಿಗೆ ಬಿದ್ದೊಡನೆ ಕನ್ನಡಿಗರು ಗುನುಗಿಕೊಳ್ಳುವ ಹಾಡುಗಳಿವು. ಬಿ.ವಿಠ್ಠಲಾಚಾರ್ಯ ನಿದೇಶನದ ಸಿನಿಮಾದಲ್ಲಿ ಡಾ.ರಾಜ್ ಹೀರೋ. ಲೀಲಾವತಿ ನಾಯಕಿ. ಉದಯ್ ಕುಮಾರ್ ಖಳನಾಯಕ. 1963ರಲ್ಲಿ ತೆರೆ ಕಂಡಿದ್ದ ಸಿನಿಮಾ ಕನ್ನಡದ ಕ್ಲಾಸಿಕ್ಗಳಲ್ಲಿ ಒಂದು. ಅರೆ.. ಇದೆಲ್ಲ ಈಗ್ಯಾಕೆ ಅಂತೀರಾ..
ವಿನಯ್ ರಾಜ್ಕುಮಾರ್ ಈಗ ಹೊಸದೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ ವೀರಕೇಸರಿ ಎಂದೇ ಟೈಟಲ್ ಇಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಅದು ವೀರಕೇಸರಿ ಅಲ್ಲ, ಯುವಕೇಸರಿ ಎನ್ನುವುದು ಈಗ ಪಕ್ಕಾ ಆಗಿದೆ.
ಮಿಸ್ಟರ್ ಎಲ್ಎಲ್ಬಿ ಚಿತ್ರ ನಿರ್ದೇಶಿಸಿದ್ದ ರಘುವರ್ಧನ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕರೂ ಅವರೇ. ಉತ್ತರ ಕರ್ನಾಟಕದಲ್ಲಿ ಚಿತ್ರದ ಶೂಟಿಂಗ್ಗೆ ಪ್ಲಾನ್ ಮಾಡಲಾಗುತ್ತಿದೆ. ನವೆಂಬರ್ನಲ್ಲಿ ಶೂಟಿಂಗ್ ಶುರುವಾಗಲಿದೆ.