ಇದೊಂಥರಾ ಸ್ಯಾಂಡಲ್ವುಡ್ ವಿಚಿತ್ರ. ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕ ಸ್ಟಾರ್ ಆದ ರಾಜ್ ಬಿ.ಶೆಟ್ಟಿ, ಈಗ ಮೊಟ್ಟೆ ಸ್ಟಾರ್ ಆದರೆ, ಬೆಲ್ಬಾಟಂನ ಸಗಣಿ ಪಿಂಟೋ ಪಾತ್ರದ ಮೂಲಕ ಚಿರಪರಿಚಿತರಾಗ ಸುಜಯ್ ಶಾಸ್ತ್ರಿ, ಸಗಣಿ ಸ್ಟಾರ್. ಅಫ್ಕೋರ್ಸ್.. ಅದು ಅವರ ಅಭಿನಯ ಪ್ರತಿಭೆಗೆ ಸಿಕ್ಕಿದ ಮನ್ನಣೆಯೂ ಹೌದು.
ಸಗಣಿ ಪಿಂಟೋ ಖ್ಯಾತಿಯ ಸುಜಯ್ ಶಾಸ್ತ್ರಿ, ನಿರ್ದೇಶಕರಾಗಿರುವ ಮೊದಲ ಸಿನಿಮಾ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ರಿಲೀಸ್ಗೆ ರೆಡಿಯಾಗಿ ನಿಂತಿದೆ. ಈ ಕಥೆಯನ್ನು ರಾಜ್ ಬಿ.ಶೆಟ್ಟಿ ಒಪ್ಪಿಕೊಳ್ಳೋಕೆ ಕಾರಣ, ಸುಜಯ್ ಕಥೆ ಹೇಳಿದ ಸ್ಟೈಲ್ ಅಂತೆ.
ಒಂದು ಮೊಟ್ಟೆಯ ಕಥೆಯಲ್ಲಿ ಇದ್ದದ್ದು ರಿಯಲೆಸ್ಟಿಕ್ ಕಾಮಿಡಿ. ಇಲ್ಲಿ ಸ್ಪೂಫ್ ಕಾಮಿಡಿ ಇದೆ. ಚಿತ್ರದಲ್ಲಿ ಪಾತ್ರಗಳನ್ನೇ ಲೇವಡಿ ಮಾಡುವ ಸ್ಟೈಲ್ ಹೊಸದು ಎನ್ನುತ್ತಾರೆ ರಾಜ್ ಬಿ.ಶೆಟ್ಟಿ.
ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕ ಹೊರಗೆ ಹೋಗುವಾಗ ಖಂಡಿತಾ ನಗು ನಗುತ್ತಾ ಹೋಗುತ್ತಾನೆ ಎನ್ನುವ ಭರವಸೆ ಶೆಟ್ಟರದ್ದು. ಚಂದ್ರಶೇಖರ್ ನಿರ್ಮಾಣದ ಸಿನಿಮಾ ಆಗಸ್ಟ್ 15ಕ್ಕೆ ರಿಲೀಸ್ ಆಗುತ್ತಿದೆ.