ನಾನು ಹೆಸರಿಗಷ್ಟೇ ಕೃಷ್ಣ, 16 ಸಾವಿರ ಗೋಪಿಕೆಯರ ಇನಿಯ.. ಆದರೆ, ಇಡೀ ಸಿನಿಮಾದಲ್ಲಿ ನನಗೆ ಒಬ್ಬರೇ ಒಬ್ಬ ನಾಯಕಿಯಿಲ್ಲ ಎಂದು ನಿರ್ಮಾಪಕ ಮುನಿರತ್ನರನ್ನು ಕಿಚಾಯಿಸಿದ್ದರು ಕೃಷ್ಣ. ರವಿಮಾಮಂಗೇ ಹೀರೋಯಿನ್ ಇಲ್ಲ ಅಂದ್ರೆ ಎಂಥ ಎಂಬ ಪ್ರಶ್ನೆ ಅಭಿಮಾನಿಗಳಿಂದ ಬಂದಿತ್ತು. ಈಗ ರವಿಮಾಮಂಗೂ ನಾಯಕಿ ಇದ್ದಾರೆ ಅನ್ನೋ ಸುದ್ದಿ ಹೊರಬಿಟ್ಟಿದೆ ಕುರುಕ್ಷೇತ್ರ ಟೀಂ.
ಶ್ರೀಕೃಷ್ಣನಿಗೆ ರುಕ್ಮಿಣಿ ಪತ್ನಿ, ಆ ಪಾತ್ರದಲ್ಲಿ ತೆಲುಗು ಮೂಲದ ನಟಿ ಪ್ರಗ್ಯಾ ಜೈಸ್ವಾಲ್ ನಟಿಸಿದ್ದಾರಂತೆ. ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್ ಸೇರಿದಂತೆ ಹಲವರ ಜೊತೆ ನಟಿಸಿರುವ ಪ್ರಗ್ಯಾ, ಇಲ್ಲಿ ರವಿಚಂದ್ರನ್ ಎದುರು ರುಕ್ಮಿಣಿ.
ಇಷ್ಟೆಲ್ಲ ಇದ್ರೂ.. ಅವರು ಬರೋದು ಒಂದೇ ಒಂದು ಸೀನ್‍ನಲ್ಲಂತೆ..