ಟಗರು ನಂತರ ಡಾಲಿ ಎಂದೇ ಫೇಮಸ್ ಆಗಿರೋ ಧನಂಜಯ್. ಕನ್ನಡಿಗರ ಪಾಲಿಗೆ ಬುಲ್‍ಬುಲ್, ಡಿಂಪಲ್ ಕ್ವೀನ್ ಆಗಿರೋ ರಚಿತಾ ರಾಮ್. ಇವರಿಬ್ಬರನ್ನೂ ಒಟ್ಟಿಗೇ ನೋಡಿ ಸಂಭ್ರಮಿಸುವ ಸಮಯ ಹತ್ತಿರವಾಗಿದೆ. ಅದು ಡಾಲಿ ಚಿತ್ರದಲ್ಲಿ.
ಎರಡನೇ ಸಲ ಚಿತ್ರದ ನಿರ್ಮಾಪಕ ಯೋಗೇಶ್ ನಾರಾಯಣ್ ಡಾಲಿ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ. ರಚಿತಾ ರಾಮ್ ಈ ಚಿತ್ರಕ್ಕೆ ಹೀರೋಯಿನ್ ಆಗುವ ಸಾಧ್ಯತೆ ಇದೆ. ಈಗಾಗಲೇ ಮಾತುಕತೆ ಮುಗಿದಿದ್ದು ಫೈನಲ್ ಹಂತದಲ್ಲಿದೆಯಂತೆ.
ಇತ್ತ ರಚಿತಾ ಆಯುಷ್ಮಾನ್ ಭವ, 100, ಏಕ್‍ಲವ್ ಯಾ ಚಿತ್ರಗಳಲ್ಲಿ ಬ್ಯುಸಿಯಿದ್ದರೆ, ಧನಂಜಯ್ ಪಾಪ್‍ಕಾರ್ನ್ ಮಂಕಿ ಟೈಗರ್, ಯುವರತ್ನ, ಪೊಗರು, ಸಲಗ ಚಿತ್ರಗಳಲ್ಲಿ ಬ್ಯುಸಿ.
ಪ್ರಭು ಶ್ರೀನಿವಾಸ್ ನಿರ್ದೇಶನದ ಡಾಲಿಯಲ್ಲಿ ಧನಂಜಯ್‍ಗೆ ಎರಡು ಶೇಡ್‍ನ ಪಾತ್ರವಿದೆಯಂತೆ.