ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರ ರಿಲೀಸ್‍ಗೆ ರೆಡಿಯಾಗಿ ಟ್ರೇಲರ್ ಬಿಟ್ಟಿದ್ದೇ ತಡ, ಚಿತ್ರದ ರೀಮೇಕ್‍ಗೆ ಡಿಮ್ಯಾಂಡ್ ಶುರುವಾಗಿದೆ. ಅದರಲ್ಲೂ ವಿಶೇಷವಾಗಿ ಬಾಲಿವುಡ್‍ನಿಂದ. ಅದಕ್ಕೆ ಕಾರಣ ಚಿತ್ರದ ನಿರ್ದೇಶಕ ಸುಜಯ್ ಶಾಸ್ತ್ರಿ. ಸಗಣಿ ಪಿಂಟೋ ಪಾತ್ರದಿಂದ ಗಮನ ಸೆಳೆದಿರುವ ಸುಜಯ್ ಶಾಸ್ತ್ರಿ, ಕಮೆಂಟೇಟರ್ ಕೂಡಾ ಹೌದು. ಫುಟ್‍ಬಾಲ್, ಕಬಡ್ಡಿ ಟೂರ್ನಮೆಂಟುಗಳಿಗೆ ಆಗಾಗ್ಗೆ ಮುಂಬೈಗೆ ಹೋಗುತ್ತಲೇ ಇರುತ್ತಾರೆ.
ಹೀಗಾಗಿ ನನಗೆ ಅಲ್ಲಿನ ಕೆಲ ಬಾಲಿವುಡ್ ಮಂದಿ ಪರಿಚಯವಿದೆ. ಚಿತ್ರದ ಟ್ರೇಲರ್ ನೋಡಿ ಇಷ್ಟಪಟ್ಟಿರುವ ಕೆಲವರು ಚಿತ್ರವನ್ನು ಹಿಂದಿಗೆ ರೀಮೇಕ್ ಮಾಡಲು ಉತ್ಸುಕತೆ ತೋರುತ್ತಿದ್ದಾರೆ. ಮಾತುಕತೆಗಳು ಜಾರಿಯಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ ಬಿ.ಶೆಟ್ಟಿ, ಕವಿತಾ ಗೌಡ ನಟಿಸಿರುವ ಚಿತ್ರದಲ್ಲಿ ಶುಭಾ ಪೂಂಜಾ, ಕಾರುಣ್ಯ ರಾಮ್, ಶೋಭರಾಜ್, ಪ್ರಮೋದ್ ಶೆಟ್ಟಿ ಮೊದಲಾದವರು ನಟಿಸಿದ್ದಾರೆ. ಅಯೋಗ್ಯ, ಚಮಕ್ ಖ್ಯಾತಿಯ ಟಿ.ಆರ್. ಚಂದ್ರಶೇಖರ್ ಚಿತ್ರದ ನಿರ್ಮಾಪಕ.