ನೀನೇನ್ ಶಾರೂಕ್ ಖಾನ್ ಥರಾನಾ ಇದ್ಯಾ..? ಬ್ಯಾಂಕ್ ಜನಾರ್ದನ್ ಕೊನೆ ತಮ್ಮನ್ ಥರಾ ಇದ್ಯಾ.. ಅವ್ನು ಡಾನ್.. ಅಯ್ಯೋ ಬಿಡಿ ಸಾರ್.. ಅವ್ರವ್ರು ಹೊಟ್ಟೆಪಾಡಿಗೆ ಏನೇನೋ ಮಾಡ್ಕೋತಾರೆ.. ನಂಗೆ ನೋ ಪ್ರಾಬ್ಲಂ..
ಸಾರ್.. ನಾನು ನಿಮ್ ಹೆಂಡ್ತೀನ್ ಕಿಡ್ನಾಪ್ ಮಾಡಿದ್ದೀನಿ.. (ಹೀರೋ ಸುತ್ತ ರಿವಾಲ್ವರು ಪ್ರತ್ಯಕ್ಷ) ತಪ್ಪಾಗೋಯ್ತು ಸಾರ್, ನಿಮ್ ತಂಗೀನ್ ಕಿಡ್ನಾಪ್ ಮಾಡಬೇಕಿತ್ತು.. (ಮತ್ತೆ ಹೀರೋ ಸುತ್ತ ರಿವಾಲ್ವರು ಪ್ರತ್ಯಕ್ಷ)
ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಟ್ರೇಲರ್‍ನ ಸ್ಯಾಂಪಲ್ಲುಗಳಷ್ಟೆ. ಟ್ರೇಲರಿನಲ್ಲೇ ನಗೆಯ ಬುಗ್ಗೆ ಉಕ್ಕಿಸಿದ್ದಾರೆ ನಿರ್ದೇಶಕ ಸುಜಯ್ ಶಾಸ್ತ್ರಿ. ರಾಜ್ ಬಿ.ಶೆಟ್ಟಿ, ಕವಿತಾ ಗೌಡ ನಟನೆಯ ಸಿನಿಮಾಗೆ ಪ್ರಸನ್ನ ಕಚಗುಳಿಯ ಸಂಭಾಷಣೆ ಕೊಟ್ಟಿದ್ದಾರೆ.
ಅಯೋಗ್ಯ, ಚಮಕ್, ಬೀರ್‍ಬಲ್ ನಂತರ ಮತ್ತೊಮ್ಮೆ ಟಿ.ಆರ್.ಚಂದ್ರಶೇಖರ್ ಗೆಲುವಿನ ನಗು ಕಾಣುತ್ತಿದ್ದಾರೆ.