ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರವೇ ಒಂದು ಕಾಮಿಡಿ ಕಥಾಹಂದರ. ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ ಹುಡುಗಿಗಾಗಿ ಹುಡುಕಾಡುವ ಸಾಫ್ಟ್‍ವೇರ್ ಎಂಜಿನಿಯರ್ ಆಗಿ ನಟಿಸಿದ್ದರೆ, ಕವಿತಾ ಗೌಡ ಪರ್ಪಲ್ ಪ್ರಿಯಾ ಆಗಿ ಕಂಗೊಳಿಸಿದ್ದಾರೆ. ಆದರೆ, ಇವರಿಗಿಂತ ಡಿಫರೆಂಟ್ ಪಾತ್ರದಲ್ಲಿರೋದು ಪ್ರಮೋದ್ ಶೆಟ್ಟಿ.
ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಬೆಲ್‍ಬಾಟಂ ಚಿತ್ರಗಳಲ್ಲಿ ನಟಿಸಿದ್ದ ಪ್ರಮೋದ್ ಶೆಟ್ಟಿ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ರಾಬಿನ್ ಹುಡ್ ಪಾತ್ರಧಾರಿ. ಆದರೆ, ನಿರ್ದೇಶಕ ಸುಜಯ್ ಶಾಸ್ತ್ರಿ ಈ ಪಾತ್ರವನ್ನು ಭಲೇ ಮಜವಾಗಿ ಕಟ್ಟಿಕೊಟ್ಟಿದ್ದಾರೆ.
ರಾಬಿನ್ ಹುಡ್ ಎಂದರೆ, ಶ್ರೀಮಂತರನ್ನು ದೋಚಿ, ಬಡವರಿಗೆ ಹಂಚುವವನು. ಆದರೆ, ಈ ರಾಬಿನ್ ಹುಡ್, ದೋಚಿದ್ದೆಲ್ಲವನ್ನೂ ತನ್ನಲ್ಲಿಯೇ ಇಟ್ಟುಕೊಂಡು ಖುಷಿ ಪಡುವವನು.
ಹೇಗೆ.. ಯಾಕೆ.. ಅಂತೆಲ್ಲ ಪ್ರಶ್ನೆ ಮಾಡ್ತಾ ಕೂರಬೇಡಿ. ಆಗಸ್ಟ್ 15ಕ್ಕೆ ಥಿಯೇಟರ್‍ಗೆ ಹೋಗಿ.. ನಕ್ಕು ನಲಿಯಿರಿ.