ತೆಲುಗು ಚಿತ್ರರಂಗದ ಸೂಪರ್ ಸ್ಟಾರ್‍ಗಳಲ್ಲಿ ಜ್ಯೂ.ಎನ್‍ಟಿಆರ್ ಒಬ್ಬರು. ಅವರೀಗ ಕನ್ನಡಕ್ಕೆ ಬರುತ್ತಿದ್ದಾರೆ. ಇದಕ್ಕೂ ಮೊದಲು ಚಕ್ರವ್ಯೂಹ ಚಿತ್ರದಲ್ಲಿ ಗಾಯಕರಾಗಿ ಬಂದಿದ್ದ ಎನ್‍ಟಿಆರ್, ಈಗ ನಾಯಕರಾಗಿ ಬರುತ್ತಿದ್ದಾರೆ. ನಿರ್ದೇಶಕ ಉಗ್ರಂ, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್.
ಆ್ಯಕ್ಷನ್ ಚಿತ್ರಗಳ ಮೂಲಕ ಇಡೀ ಇಂಡಿಯಾದಲ್ಲಿ ಜನಪ್ರಿಯರಾದ ಪ್ರಶಾಂತ್ ನೀಲ್, ಸಂಗೀತ, ನೃತ್ಯ ಪ್ರಧಾನ ಮಾಡುತ್ತಿದ್ದಾರೆ. ಶಾಸ್ತ್ರೀಯ ನೃತ್ಯದಲ್ಲಿ ಎನ್‍ಟಿಆರ್ ತರಬೇತಿ ಪಡೆದಿರುವ ಕಲಾವಿದ. ಕೂಚುಪುಡಿಯಲ್ಲಂತೂ ಪ್ರವೀಣ. ಪ್ರಶಾಂತ್ ನೀಲ್ ಅವರು ಎನ್‍ಟಿಆರ್ ಆಯ್ಕೆ ಮಾಡಿಕೊಳ್ಳೋಕೆ ಇದೂ ಒಂದು ಕಾರಣ. ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರ ನಿರ್ಮಾಣವಾಗಲಿದೆ. ಅಂದಹಾಗೆ ಎನ್‍ಟಿಆರ್ ಒಳ್ಳೆಯ ಕನ್ನಡ ಮಾತನಾಡುತ್ತಾರೆ.
ಸದ್ಯಕ್ಕೆ ಎನ್‍ಟಿಆರ್, ರಾಜಾಮೌಳಿಯವರ ಆರ್‍ಆರ್‍ಆರ್‍ನಲ್ಲಿ ಒಂದು ವರ್ಷ ಬ್ಯುಸಿ. ಇತ್ತ ಪ್ರಶಾಂತ್ ನೀಲ್ ಕೆಜಿಎಫ್-2ನಲ್ಲಿ ಬ್ಯುಸಿ. ಸ್ಸೋ.. ಈ ಚಿತ್ರದ ಅಪ್‍ಡೇಟ್ ಏನಿದ್ದರೂ ಒಂದು ವರ್ಷದ ನಂತರ.