ಯುವರತ್ನ ಚಿತ್ರದ ತಾರಾಬಳಗ ದೊಡ್ಡದು..ದೊಡ್ಡದು.. ಇನ್ನೂ ದೊಡ್ಡದಾಗುತ್ತಿದೆ. ಪುನೀತ್ ರಾಜ್‍ಕುಮಾರ್‍ಗೆ ಸಯೇಷಾ ಜೋಡಿ. ಇನ್ನು ಚಿತ್ರದಲ್ಲಿ ರಾಧಿಕಾ ಶರತ್ ಕುಮಾರ್, ಡಾಲಿ ಧನಂಜಯ್, ದಿಗಂತ್, ಪ್ರಕಾಶ್ ರೈ, ಸೋನು ಗೌಡ, ವಸಿಷ್ಠ ಸಿಂಹ, ತ್ರಿವೇಣಿ ರಾವ್.. ಹೀಗೆ ದೊಡ್ಡ ತಾರಾಬಳಗವೇ ಇದೆ.
ಇವರೆಲ್ಲರ ಜೊತೆಯಲ್ಲೀಗ ಸಾಯಿ ಕುಮಾರ್ ಸೇರಿಕೊಂಡಿದ್ದಾರೆ. ಪುನೀತ್ ಚಿತ್ರದಲ್ಲಿ ಸಾಯಿಕುಮಾರ್ ನಟಿಸುತ್ತಿರುವುದು ಇದೇ ಮೊದಲು. ಅಷ್ಟೇ ಅಲ್ಲ, ರಂಗಾಯಣ ರಘು ಕೂಡಾ ಯುವರತ್ನ ಟೀಂಗೆ ಎಂಟ್ರಿ ಕೊಟ್ಟಿದ್ದಾರೆ.
ಸಂತೋಷ್ ಆನಂದ್‍ರಾಮ್, ಹೊಂಬಾಳೆ ಫಿಲಂಸ್, ವಿಜಯ್ ಕಿರಗಂದೂರು ಮತ್ತು ಪುನೀತ್ ರಾಜ್‍ಕುಮಾರ್ ಕಾಂಬಿನೇಷನ್ನಿನ ಸಿನಿಮಾದ ಕ್ಯಾನ್‍ವಾಸ್ ದೊಡ್ಡದಾಗುತ್ತಲೇ ಇದೆ.