ಡಾಲಿ ಧನಂಜಯ್, ಈಗ ಎಸಿಪಿ ಸಮರ್ಥ್. ಅವರಿಗೆ ಪೊಲೀಸ್ ವೇಷ ಹಾಕಿಸಿರುವುದು ದುನಿಯಾ ವಿಜಯ್. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ ಧನಂಜಯ್. ಅಂದಹಾಗೆ ಧನಂಜಯ್ ಪಾತ್ರಕ್ಕೆ ಅಣ್ಣಾಮಲೈ ಅವರ ರಿಯಲ್ ಗೆಟಪ್ ನೋಡಿ ರೆಡಿಯಾಗಿದ್ದಾರಂತೆ.
ಅಣ್ಣಾಮಲೈ ಅವರನ್ನು ನೋಡಿದಾಗಲೆಲ್ಲ ಪೊಲೀಸ್ ಎಂದರೆ ಹೀಗಿರಬೇಕು ಎನಿಸುತ್ತಿತ್ತು. ಅದೇ ದೃಷ್ಟಿಯಲ್ಲಿ ಕ್ಲೀನ್ ಶೇವ್ ಮಾಡಿಸಿಕೊಂಡು ಬಾಡಿ ಫಿಟ್ ಮಾಡಿಕೊಂಡು ರೆಡಿಯಾಗಿದ್ದೇನೆ ಎನ್ನುವ ಧನಂಜಯ್ಗೆ ಸಮರ್ಥ್ ಪಾತ್ರಕ್ಕೆ ಡಾಲಿಗಿಂತಲೂ ಹೆಚ್ಚು ಫ್ಯಾನ್ಸ್ ಹುಟ್ಟಿಕೊಳ್ತಾರೆ ಅನ್ನೋ ಭರವಸೆ ಇದೆ.
ಸಲಗ ಚಿತ್ರಕ್ಕೆ ದುನಿಯಾ ವಿಜಿ ಹೀರೋ ಅಷ್ಟೇ ಅಲ್ಲ, ಡೈರೆಕ್ಟರೂ ಹೌದು. ವಿಜಿ, ನನ್ನ ಪಾತ್ರಕ್ಕೆ ಒಳ್ಳೆಯ ಸ್ಕೋಪ್ ಕೊಟ್ಟಿದ್ದಾರೆ ಎಂದು ಖುಷಿಯಾಗಿದ್ದಾರೆ ಧನಂಜಯ್.