ಸಿಂಗ ಚಿತ್ರದ ಶ್ಯಾನೆ ಟಾಪಾಗವ್ಳೆ ಹಿಟ್ ಆಗಿದ್ದೇ ತಡ.. ಯಾರೀ ನಾಗಕನ್ನಿಕೆ ಎಂದು ಹುಡುಕಾಡಿದವರ ಸಂಖ್ಯೆ ಲಕ್ಷ ಲಕ್ಷ. ಅದಿತಿ ಪ್ರಭುದೇವ ನಾಗಕನ್ನಿಕೆಯಾಗಿಯೇ ಕನ್ನಡ ಕಲಾರಸಿಕರಿಗೆ ಪರಿಚಯವಾದ ಹುಡುಗಿ.
ಧೈರ್ಯಂ ಮೂಲಕ ಪದಾರ್ಪಣೆ ಮಾಡಿ, ಬಜಾರ್‍ನಲ್ಲಿ ಭರ್ಜರಿಯಾಗಿ ಸದ್ದು ಮಾಡಿದ್ದ ಅದಿತಿ, ಈಗ ಸಿಂಗಂನಿಂದ ಇನ್ನೂ ಒಂದು ಎತ್ತರಕ್ಕೇರಿದ್ದಾರೆ. 3 ವರ್ಷಗಳಲ್ಲಿ 9 ಚಿತ್ರಗಳಿಗೆ ಸಹಿ ಮಾಡಿರುವ ಬ್ಯುಸಿ ಹೀರೋಯಿನ್ ಅದಿತಿ.
ಆದರೆ, ಇದೇ ಅದಿತಿಯನ್ನು ಸುಮಾರು 20 ಚಿತ್ರಗಳಿಂದ ರಿಜೆಕ್ಟ್ ಮಾಡಲಾಗಿತ್ತಂತೆ.
ಧೈರ್ಯಂ ಸಿನಿಮಾ ನಂತರ ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಕಾದೆ. ಇದರ ನಡುವೆ ಸೀರಿಯಲ್ ಅವಕಾಶ ಸಿಕ್ಕಿತು. ಆದರೆ, ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳ ಅಡಿಷನ್‍ನಲ್ಲಿ ಸೀರಿಯಲ್‍ನಲ್ಲಿ ನಟಿಸುತ್ತಿದ್ದೇನೆ ಎನ್ನುವ ಕಾರಣಕ್ಕಾಗಿಯೇ ರಿಜೆಕ್ಟ್ ಮಾಡಿದ್ರು. ಆದರೆ ಅದರ ಬಗ್ಗೆ ನನಗೆ ಬೇಜಾರಿಲ್ಲ. ಅದು ನನಗೆ ಅನ್ನ ಹಾಕಿದೆ. ಅಭಿನಯ ಕಲಿಸಿದೆ ಎನ್ನುತ್ತಾರೆ ಅದಿತಿ.
ಸಿಂಪಲ್ ಸುನಿ ನಿರ್ದೇಶನದ ಬಜಾರ್ ನಂತರ ಅದಿತಿ ಗುರುತಿಸಿಕೊಂಡರು. ಈಗ ಕೈತುಂಬಾ ಚಿತ್ರಗಳು. ಯೋಗರಾಜ್ ಭಟ್, ದಯಾಳ್ ಪದ್ಮನಾಭನ್ ಮೊದಲಾದ ನಿರ್ದೇಶಕರ ಚಿತ್ರಗಳಲ್ಲಿ, ಜಗ್ಗೇಶ್, ದುನಿಯಾ ವಿಜಯ್ ಮೊದಲಾದ ನಟರ ಚಿತ್ರಗಳಲ್ಲಿ ಈಗ ಅದಿತಿ ನಟಿಸುತ್ತಿದ್ದಾರೆ.
ಸೀರಿಯಲ್‍ನವರು ಅಂದ್ರೆ ಯಾಕೆ ಹಾಗೆ ಮಾಡ್ತಾರೋ ಗೊತ್ತಿಲ್ಲ. ದರ್ಶನ್, ಯಶ್, ಗಣೇಶ್, ರಾಧಿಕಾ ಪಂಡಿತ್, ರಚಿತಾ ರಾಮ್.. ಇವರೆಲ್ಲರೂ ಸೀರಿಯಲ್‍ನಿಂದಲೇ ಬಂದವರಲ್ಲವೇ ಎಂದು ಪ್ರಶ್ನಿಸುವ ಅದಿತಿಗೆ ಅದು ಈಗಲೂ ಅರ್ಥವೇ ಆಗದ ಸಂಗತಿ. ಸದ್ಯಕ್ಕಂತೂ ಅದಿತಿ ಶ್ಯಾನೆ ಟಾಪಾಗವ್ಳೆ.