` ಪ್ರೀತಿಯಲ್ಲಿ ಬಂದ್ರೆ ಪ್ರೇಮಲೋಕ.. ರಣವೀಳ್ಯ ಕೊಟ್ಟು ಬಂದ್ರೆ ರಣಧೀರ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ravichandran fans thrilled over mass dialogues
Dasharatha Movie Image

ರವಿಚಂದ್ರನ್ ಅಂದ್ರೆ ಹತ್ತಾರು ಸಿನಿಮಾಗಳ ಹೆಸರು ಥಟ್ಟಂತ ಕಣ್ಣ ಮುಂದೆ ಬರುತ್ವೆ. ಪ್ರೇಮಲೋಕ ಮತ್ತು ರಣಧೀರ ಫಸ್ಟು ಸೆಕೆಂಡು ಲಿಸ್ಟಿನಲ್ಲೇ ಇರುತ್ವೆ. ರವಿಚಂದ್ರನ್ ಈಗ ದಶರಥನಾಗಿ ಬಂದಿದ್ದಾರೆ. ಲಾಯರ್ ದಶರಥ. ಚಿತ್ರದ ಟ್ರೇಲರ್‍ನ ಮೊದಲನೇ ಡೈಲಾಗ್ ಇದು..ಪ್ರೀತಿಯಲ್ಲಿ ಬಂದ್ರೆ ಪ್ರೇಮಲೋಕ.. ರಣವೀಳ್ಯ ಕೊಟ್ಟು ಬಂದ್ರೆ ರಣಧೀರ.

ಅಭಿಮಾನಿಗಳ ಹೃದಯಕ್ಕೇ ಕಿಚ್ಚು ಹಚ್ಚುವ ಇಂತಹ ಡೈಲಾಗು ಬರೆಯೋದ್ರಲ್ಲಿ ಎಂ.ಎಸ್.ರಮೇಶ್ ಹೆಸರುವಾಸಿ. ಚಿತ್ರದ ಟ್ರೇಲರ್ ನೋಡಿದವರಿಗೆ ಇದು ದೃಶ್ಯ ಚಿತ್ರದಂತೆಯೇ ಥ್ರಿಲ್ಲರ್ ಸಿನಿಮಾ ಎನ್ನುವುದು ಗೊತ್ತಾಗುತ್ತೆ. ದೃಶ್ಯದಲ್ಲಿ ಕೋರ್ಟ್ ಇರಲಿಲ್ಲ, ಇಲ್ಲಿ ಕೋರ್ಟೇ ಎಲ್ಲ.

ಸೋನಿಯಾ ಅಗರ್‍ವಾಲ್, ರಂಗಾಯಣ ರಘು, ಅಭಿರಾಮಿ, ಶೋಭರಾಜ್, ಅವಿನಾಶ್ ನಟಿಸಿರುವ ಸಿನಿಮಾಗೆ ಅಕ್ಷಯ್ ನಿರ್ಮಾಪಕರು. ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.

Matthe Udbhava Trailer Launch Gallery

Maya Bazaar Pressmeet Gallery