` ಶಾರೂಕ್ ಅದೃಷ್ಟದ ರೂಂನಲ್ಲಿ ನೆನಪಿರಲಿ ಪ್ರೇಮ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
nenapirali prem in sharukh khan's lucky room
Nenapirali Prem

ನೆನಪಿರಲಿ ಪ್ರೇಮ್, ತಮ್ಮ ವೃತ್ತಿಜೀವನದ ಒಂದು ಮೈಲಿಗಲ್ಲಿನಲ್ಲಿ ನಿಂತಿದ್ದಾರೆ. ಅವರ 25ನೇ ಸಿನಿಮಾ ಪ್ರೇಮಂ ಪೂಜ್ಯಂ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಆ ಶೂಟಿಂಗ್ ವೇಳೆಯಲ್ಲಿಯೇ ಅವರಿಗೆ ಶಾರೂಕ್ ಅವರ ಅದೃಷ್ಟದ ರೂಂ ಸಿಕ್ಕಿದೆ.

ಮನ್ನಾರ್‍ನಲ್ಲಿ ಶೂಟಿಂಗ್‍ನಲ್ಲಿರುವ ಪ್ರೇಮ್‍ಗೆ ಅಲ್ಲಿನ ಹೋಟೆಲ್‍ನ ಸ್ಪೆಷಲ್ ರೂಂ ನೀಡಲಾಗಿದೆ. ಅದು ಚೆನ್ನೈ ಎಕ್ಸ್‍ಪ್ರೆಸ್ ಚಿತ್ರೀಕರಣದ ವೇಳೆ ಶಾರೂಕ್ ಖಾನ್ ಉಳಿದುಕೊಂಡಿದ್ದ ರೂಂ. ಶಾರೂಕ್ ನೆನಪಿಗಾಗಿ ಆ ರೂಂನ್ನು ಶಾರೂಕ್ ಹಾಗೂ ಚೆನ್ನೈ ಎಕ್ಸ್‍ಪ್ರೆಸ್ ಪೋಸ್ಟರುಗಳಿಂದಲೇ ಅಲಂಕರಿಸಲಾಗಿದೆ. 

ಶಾರೂಕ್ ಅಭಿಮಾನಿಯೂ ಆಗಿರುವ ಪ್ರೇಮ್‍ಗೆ ಇದು ಥ್ರಿಲ್ ಕೊಟ್ಟಿದೆ. ಶಾರೂಕ್‍ಗೆ ಚೆನ್ನೈ ಎಕ್ಸ್‍ಪ್ರೆಸ್‍ನಂತಹುದೇ ದೊಡ್ಡ ಸಕ್ಸಸ್ ಸಿಗಲಿ.

Matthe Udbhava Trailer Launch Gallery

Maya Bazaar Pressmeet Gallery