` ನಟಿಯ ಅತ್ಯಾಚಾರಕ್ಕೂ.. ದಶರಥನಿಗೂ ಏನ್ ಸಂಬಂಧ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
actress rape mystery in dasharatha movie
Dasharatha Movie Image

ಸೆಲಬ್ರಿಟಿಗಳ ಮೇಲೆ ಅತ್ಯಾಚಾರಗಳಾದಾಗ ಸಹಜವಾಗಿಯೇ ಸೆನ್ಸೇಷನ್ ಸೃಷ್ಟಿಯಾಗುತ್ತೆ. ಅತ್ಯಾಚಾರವೇ ಭಯಂಕರ.. ಅಂಥದ್ದರಲ್ಲಿ ನಟಿಯೊಬ್ಬಳ ಮೇಲೆ ಅತ್ಯಾಚಾರವೆಂದರೆ.. ದಶರಥ ಚಿತ್ರದಲ್ಲಿರುವುದೇ ಇಂತಹ ಸೆನ್ಸೇಷನ್ ಕಥೆ. ಟ್ರೇಲರ್ ನೋಡಿದವರಿಗೆ ಎಂ.ಎಸ್.ರಮೇಶ್ ಹೊಸದೇನನ್ನೋ ಹೇಳಲು ಹೊರಟಿದ್ದಾರೆ ಎಂದು ಅನ್ನಿಸೋದು ಸುಳ್ಳಲ್ಲ.

ಮೆಸೇಜ್ ಕೊಡುವುದನ್ನೂ ಕಮರ್ಷಿಯಲ್ಲಾಗಿಯೇ ಹೇಳುವ ಕಲೆ ನಿರ್ದೇಶಕ ರಮೇಶ್‍ಗೆ ಸಿದ್ದಿಸಿದೆ. ನಟಿ ಮೇಲಿನ ಅತ್ಯಾಚಾರವೆಂದರೆ.. ಎಲ್ಲೋ ಕೇಳಿದಂತಿದೆಯಲ್ಲ ಅನ್ನಿಸುವುದು ಸಹಜ. ರಿಯಲ್ ಸ್ಟೋರಿ ಇರಬಹುದೇನೋ ಎನ್ನುವ ಪ್ರಶ್ನೆ ಮೂಡುವುದೂ ಅಷ್ಟೇ ಸಹಜ. ಆದರೆ, ರಮೇಶ್ ಆ ಯಾವ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ಅಷ್ಟರಮಟ್ಟಿಗೆ ಟ್ರೇಲರ್ ಸಕ್ಸಸ್.

ರವಿಚಂದ್ರನ್, ರಂಗಾಯಣ ರಘು, ಸೋನು ಅಗರ್‍ವಾಲ್, ಶೋಭರಾಜ್, ಅವಿನಾಶ್, ಅಭಿನೇತ್ರಿ ನಟಿಸಿರುವ ಚಿತ್ರಕ್ಕೆ ಅಕ್ಷಯ್ ನಿರ್ಮಾಪಕರು. ಇದೇ ವಾರ ತೆರೆಗೆ ಬರುತ್ತಿದ್ದಾನೆ ದಶರಥ.

Matthe Udbhava Trailer Launch Gallery

Maya Bazaar Pressmeet Gallery