` ದುರ್ಯೋಧನ, ಭೀಷ್ಮನನ್ನು ನೋಡಲು ಕಾಯುತ್ತಿದ್ದೇನೆ - ಸುಮಲತಾ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sumalatha eagerly waiting for muniratna;s kurukshetra
Kurukshetra Movie Image, Sumalatha Ambareesh

ಮುನಿರತ್ನ ಕುರುಕ್ಷೇತ್ರ ಬಿಡುಗಡೆಗೆ ಲಕ್ಷಾಂತರ ಅಭಿಮಾನಿಗಳು ಕಾಯುತ್ತಿರುವಂತೆಯೇ ಸುಮಲತಾ ಅಂಬರೀಷ್ ವಿಶೇಷವಾಗಿ ಕಾಯುತ್ತಿದ್ದಾರೆ. ಅವರ ಕಾಯುವಿಕೆಗೆ ವಿಶೇಷ ಅರ್ಥವೂ ಇದೆ. ಕುರುಕ್ಷೇತ್ರ ಚಿತ್ರ ರೆಬಲ್ ಸ್ಟಾರ್ ಅಂಬರೀಷ್ ಅಭಿನಯಿಸಿರುವ ಕಟ್ಟಕಡೆಯ ಸಿನಿಮಾ. ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರಕ್ಕೂ ಮೊದಲೇ ಶೂಟಿಂಗ್ ಆಗಿದ್ದರೂ, ಈಗ ರಿಲೀಸ್ ಆಗುತ್ತಿದೆ. ಅಂಬಿ, ಭೀಷ್ಮ ಪಿತಾಮಹನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಸುಮಲತಾ ಅವರ ಪ್ರೀತಿಯ ಪುತ್ರ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ. ಇಡೀ ಚಿತ್ರವನ್ನು ದುರ್ಯೋಧನನ್ನು ಕೇಂದ್ರೀಕರಿಸಿ ಮಾಡಲಾಗಿದೆ. ಹೀಗಾಗಿಯೇ ಸುಮಲತಾ ಅಂಬರೀಷ್ `ಭೀಷ್ಮ, ದುರ್ಯೋಧನರನ್ನು ನೋಡಲು ನಾನು ಕಾತರುಳಾಗಿದ್ದೇನೆ' ಎಂದಿದ್ದಾರೆ. ಕುರುಕ್ಷೇತ್ರ ಆಗಸ್ಟ್ 2ರಂದು ರಿಲೀಸ್ ಆಗುತ್ತಿದೆ.

Matthe Udbhava Trailer Launch Gallery

Maya Bazaar Pressmeet Gallery