` ಗುರುಕಿರಣ್, ಎಂ ಎಸ್ ರಮೇಶ್ ಜನುಮದ ಜೋಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ms ramesh and music director gurukiran again
MS Ramesh, Guru Kiran

ಎಂ.ಎಸ್.ರಮೇಶ್ ಕನ್ನಡದ ಸ್ಟಾರ್ ಡೈರೆಕ್ಟರುಗಳಲ್ಲಿ ಒಬ್ಬರು. ಗುರುಕಿರಣ್ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್. ಸ್ಟಾರ್ ಡೈರೆಕ್ಟರ್ ಮತ್ತು ಸ್ಟಾರ್ ಡೈರೆಕ್ಟರ್ ಒಟ್ಟೊಟ್ಟಿಗೇ ಪದೇ ಪದೇ ಸಿನಿಮಾ ಮಾಡುವುದು ಅಪರೂಪ. ಹಂಸಲೇಖ ಮತ್ತು ರವಿಚಂದ್ರನ್ ವಿಷಯ ಬಿಡಿ, ಅವರದ್ದು ವಿಶೇಷ ದಾಖಲೆ. ಅಂತಹುದೇ ಇನ್ನೊಂದು ಜೋಡಿ ಎಂ.ಎಸ್.ರಮೇಶ್ ಮತ್ತು ಗುರುಕಿರಣ್ ಅವರದ್ದು.

ರಮೇಶ್‍ಗೆ ಸ್ಟಾರ್ ಪಟ್ಟ ತಂದುಕೊಟ್ಟ ಧಮ್ ಚಿತ್ರದಿಂದ ಶುರುವಾದ ನಂಟು, ಸ್ನೇಹ ಹಾಗೆಯೇ ಇದೆ. ಧಮ್, ಶ್ರೀರಾಮ್, ಧ್ರುವ.. ಹೀಗೆ ಕಂಟಿನ್ಯೂ ಆದ ಜೋಡಿಯ 14ನೇ ಸಿನಿಮಾ ದಶರಥ.

ದಶರಥ ಚಿತ್ರದಲ್ಲಿ ರವಿಚಂದ್ರನ್ ಹೀರೋ. ತೆರೆಯ ಹಿಂದೆ ರಮೇಶ್ ಹೀರೋ ಅರ್ಥಾತ್ ನಿರ್ದೇಶಕ. ಸಂಗೀತದಲ್ಲಿ ಗುರುಕಿರಣ್. ಒಟ್ಟಿನಲ್ಲಿ ರಮೇಶ್ ಮತ್ತು ಗುರುಕಿರಣ್ ಜನುಮದ ಜೋಡಿ ಎಂದೇ ಫೇಮಸ್ ಆಗಿಬಿಟ್ಟಿದ್ದಾರೆ. ದಶರಥ ಇದೇ ವಾರ ರಿಲೀಸ್ ಆಗುತ್ತಿದೆ.

Matthe Udbhava Trailer Launch Gallery

Maya Bazaar Pressmeet Gallery