` ಕನ್ನಡ ಕಷ್ಟ ಎಂದು ತಮಿಳಿನಲ್ಲಿ ಹೇಳಿದ ರಶ್ಮಿಕಾ ಮಂದಣ್ಣ - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
rashmika in controversy again
Rashmika Mandanna

ರಶ್ಮಿಕಾ ಮಂದಣ್ಣ, ಕನ್ನಡದವರೇ. ಕೊಡಗಿನ ಹುಡುಗಿ. ಹುಟ್ಟಿದ್ದು, ಬೆಳೆದಿದ್ದು, ಓದಿದ್ದು, ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಎಲ್ಲವೂ ಕನ್ನಡದಲ್ಲಿಯೇ. ಆದರೆ ಈಗ ಹೊಸದೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ರಶ್ಮಿಕಾ-ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾ ಪ್ರಚಾರಕ್ಕೆ ಚೆನ್ನೈಗೆ ಹೋಗಿದ್ದ ವೇಳೆ ರಶ್ಮಿಕಾ `ನನಗೆ ಕನ್ನಡ ಮಾತಾಡುವುದು ಕಷ್ಟ' ಎಂದು ಸ್ಪಷ್ಟ ತಮಿಳಿನಲ್ಲಿ ಹೇಳಿದ್ದಾರೆ. ಅದೂ ವೇದಿಕೆಯಲ್ಲಿ.

ಕನ್ನಡ ಸಿನಿಮಾ ಪ್ರಚಾರದ ವೇಳೆ ಕನ್ನಡಕ್ಕಿಂತ ಹೆಚ್ಚು ಇಂಗ್ಲಿಷ್‍ನಲ್ಲಿಯೇ ಮಾತನಾಡುವ ರಶ್ಮಿಕಾ, ತಮಿಳು ಹಾಗೂ ತೆಲುಗಿನಲ್ಲಿ ಇಂಗ್ಲಿಷ್‍ನ್ನು ಬಳಸುವುದು ಕಡಿಮೆಯೇ. 

ಸಹಜವಾಗಿಯೇ ರಶ್ಮಿಕಾರ ಈ ಧೋರಣೆ ಕನ್ನಡಿಗರನ್ನು ಕೆರಳಿಸಿದೆ. ಮಾತೃಭಾಷೆಯೇ ಕಷ್ಟ ಎನ್ನುವ ನಟಿಯ ಚಿತ್ರವನ್ನು ನಾವೇಕೆ ನೋಡಬೇಕು ಎಂಬ ಅಭಿಯಾನವೇ ಶುರುವಾಗಿದೆ. ಪ್ರಾಬ್ಲಂ ಇರುವುದೇ ಇಲ್ಲಿ. ಬೇರೆ ಭಾಷೆಗಳನ್ನು ಸಹಜವಾಗಿ ಕಲಿತು ಮಾತನಾಡುವ ನಾವು, ನಮಗೆ ಕನ್ನಡ ಬರೋದಿಲ್ಲ ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಸದ್ಯಕ್ಕಂತೂ ರಶ್ಮಿಕಾ ಮಂದಣ್ಣ ವಿವಾದದ ಕೇಂದ್ರಬಿಂದುವಾಗಿದ್ದಾರೆ.

 

Kurukshetra Celebrity Show Gallery

Rightbanner02_gimmick_inside

Nanna Prakara Movie Images