Print 
darshan, muniratna kurukshetra,

User Rating: 5 / 5

Star activeStar activeStar activeStar activeStar active
 
elliruve hariye
Kurukshetra Draupadi Vasthraharan song

ಕುರುಕ್ಷೇತ್ರ ಯುದ್ಧಕ್ಕೆ ಮುನ್ನುಡಿ ಬರೆಯುವುದೇ ದ್ರೌಪದಿಯ ವಸ್ತ್ರಾಪಹರಣ. ಆ ವಸ್ತ್ರಾಪಹರಣದ ದೃಶ್ಯದ ಹಿನ್ನೆಲೆಯ ಹಾಡನ್ನು ಹೊರತಂದಿದೆ ಕುರುಕ್ಷೇತ್ರ ಟೀಂ. ದ್ರೌಪದಿಯಾಗಿ ಅಭಿನಯಿಸಿರುವ ಸ್ನೇಹಾ, ಹಸ್ತಿನಾವತಿಯ ಅರಮನೆಯಲ್ಲ ಕುಳಿತಿರುವ ಕುರುವಂಶದ ಹಿರಿಯರನ್ನು ಹೀಯಾಳಿಸುತ್ತಾ.. ನೆರವು ನೀಡು ತಂದೆಯೇ ಎಂದು ಶ್ರೀಕೃಷ್ಣನಿಗೆ ಮೊರೆ ಹೋಗುವ ಹಾಡದು.

ಎಲ್ಲಿರುವೆ ಹರಿಯೇ.. ದ್ವಾರಕೆಯ ದೊರೆಯೇ.. ಈ ಅಬಲೆ ಮೊರೆ ಕೇಳಿ ಬರಬಾರದೆ ಎಂಬ ಹಾಡಿಗೆ ಸಂಗೀತ ನೀಡಿರುವುದು ಹರಿಕೃಷ್ಣ. ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಭಾವ ತುಂಬಿ ಹಾಡಿರುವುದು ಅನುರಾಧಾ ಭಟ್. ರನ್ನನ ಗದಾಯುದ್ಧವನ್ನೇ ಆಧಾರವಾಗಿಟ್ಟುಕೊಂಡು ಜಿ.ಕೆ. ಭಾರವಿ ಚಿತ್ರಕಥೆ ಬರೆದಿದ್ದು, ನಾಗಣ್ಣ ಚಿತ್ರವನ್ನು ನಿರ್ದೇಶಿಸಿದ್ದಾರೆ.

ದರ್ಶನ್ ದುರ್ಯೋಧನನಾಗಿ, ಅಂಬರೀಷ್ ಭೀಷ್ಮನಾಗಿ, ರವಿಚಂದ್ರನ್ ಶ್ರೀಕೃಷ್ಣನಾಗಿ ನಟಿಸಿರುವ ಚಿತ್ರದಲ್ಲಿ ಸ್ಯಾಂಡಲ್‍ವುಡ್ ಸ್ಟಾರ್‍ನಟರ ಸಮಾಗಮವೇ ಆಗಿದೆ.