` ಡ್ಯಾನ್ಸು, ಫೈಟಿಗೆ ರೆಡಿ : ಥ್ಯಾಂಕ್ಯೂ ಡಾಕ್ಟರ್ ಎಂದ ಶಿವಣ್ಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivanna gets green signal for fight and dance
Dr.Andrew Wallaca, Shivarajkumar

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಲಂಡನ್‍ನಲ್ಲಿ ಭುಜದ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಆಪರೇಷನ್ ಮುಗಿದ ನಂತರ ಸದ್ಯಕ್ಕೆ ರೆಸ್ಟ್. ಮಲಗಿಕೊಂಡೇ ಇರಬೇಕೆಂದೇನಿಲ್ಲ. ಪತ್ನಿ ಗೀತಾ ಜೊತೆಯಲ್ಲಿಯೇ ಇರೋದ್ರಿಂದ ಲಂಡನ್ ಸುತ್ತುತ್ತಿದ್ದಾರೆ ಶಿವಣ್ಣ. ಪ್ರತಿದಿನ ಚೆಕಪ್ ಮಿಸ್ ಮಾಡಿಕೊಳ್ತಿಲ್ಲ.

ಶಿವರಾಜ್‍ಕುಮಾರ್ ಅವರಿಗೆ ಚಿಕಿತ್ಸೆ ನೀಡಿದ ಡಾಕ್ಟರ್ ಹೆಸರು ಆ್ಯಂಡ್ರೂ ವ್ಯಾಲೇಸ್. ಸದಾ ನಗುತ್ತಲೇ ಇರುವ ಪಾಸಿಟಿವ್ ಡಾಕ್ಟರ್ ಎಂದಿರುವ ಶಿವಣ್ಣಗೆ ಡ್ಯಾನ್ಸ್, ಫೈಟ್ ಮಾಡೋಕೆ ನೋ ಪ್ರಾಬ್ಲಂ ಎಂದಿದ್ದಾರಂತೆ ವೈದ್ಯರು. ಶಿವರಾಜ್ ಕುಮಾರ್ ಅವರಿಗಂತೂ ಈಗ ಯಾವಾಗ ಬೆಂಗಳೂರಿಗೆ ಬಂದೇನು.. ಯಾವಾಗ ಶೂಟಿಂಗಿಗೆ ಹೋದೇನು ಎಂದು ತುಡಿಯುತ್ತಿದ್ದಾರೆ. ರೆಸ್ಟ್ ಮಿಸ್ ಮಾಡಬೇಡಿ ಶಿವಣ್ಣ, ನಿಧಾನವಾದರೂ ಪರವಾಗಿಲ್ಲ, ಸಂಪೂರ್ಣ ಗುಣಮುಖರಾಗಿ ಎನ್ನುತ್ತಿದ್ದಾರೆ ಫ್ಯಾನ್ಸ್.

Kurukshetra Celebrity Show Gallery

Rightbanner02_gimmick_inside

Nanna Prakara Movie Images