ಆದಿಲಕ್ಷ್ಮಿ ಪುರಾಣ.. ಇದೇ ವಾರ ರಿಲೀಸ್ ಆಗುತ್ತಿರುವ ಸಿನಿಮಾ. ರಾಧಿಕಾ ಪಂಡಿತ್, ನಿರೂಪ್ ಭಂಡಾರಿ ನಟಿಸಿರುವ ಚಿತ್ರದ ನಿರ್ದೇಶಕಿ ಪ್ರಿಯಾ. ತಮಿಳುನಾಡಿನವರಾದ ಪ್ರಿಯಾ ಮಣಿರತ್ನಂ ಅವರ ಬಳಿ ಅಸಿಸ್ಟೆಂಟ್ ಆಗಿದ್ದವರು. ಮಣಿರತ್ನಂ ಅವರ ಪತ್ನಿ ಸುಹಾಸಿನಿ ಜೊತೆಯಲ್ಲೂ ಕೆಲಸ ಮಾಡಿದ್ದಾರೆ.
ತಮಿಳಿನಲ್ಲಿ ಕಂಡನಾಳ್ ಮುದುಲ್, ಕಣ್ಣಾಮೂಚಿ ಏನಡ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಮಣಿರತ್ನಂ ದೃಶ್ಯಗಳನ್ನು ಸೃಷ್ಟಿಸುವ ಕಲೆ ಮತ್ತು ಸುಹಾಸಿನಿಯವರ ಬರವಣಿಗೆಯನ್ನು ಇಷ್ಟಪಡುವ ಪ್ರಿಯಾಗೆ ಕನ್ನಡದಲ್ಲಿದು ಮೊದಲ ಚಿತ್ರ.
ಅಂದಹಾಗೆ ಚಿತ್ರಕ್ಕೆ ನಾಯಕ, ನಾಯಕಿಯ ಆಯ್ಕೆಯನ್ನು ರಾಕ್‍ಲೈನ್ ಅವರೇ ಮಾಡಿದ್ದರಂತೆ. ಹಾಗೆಂದು ಬೇಸರವೇನಿಲ್ಲ. ಅವರಿಬ್ಬರೂ ತಮ್ಮ ಪಾತ್ರಕ್ಕೆ ಅದ್ಭುತವಾಗಿ ನ್ಯಾಯ ಒದಗಿಸಿದ್ದಾರೆ. ಈಗ ಅವರ ಜಾಗದಲ್ಲಿ ಇನ್ನೊಬ್ಬರನ್ನು ಕಲ್ಪಿಸಿಕೊಳ್ಳುವುದೂ ಕಷ್ಟ ಎನ್ನುತಾರೆ ಪ್ರಿಯಾ.
ಪ್ರಿಯಾ ನಿರ್ದೇಶನದ ಮೊದಲ ಚಿತ್ರಕ್ಕೆ ಕ್ಯಾಮೆರಾಮನ್ ಆಗಿರುವುದು ಅವರ ಗೆಳತಿ ಪ್ರೀತಾ. ಕನ್ನಡದಲ್ಲಿ ಸಿನಿಮಾ ಯಶಸ್ವಿಯಾದರೆ ತಮಿಳಿನಲ್ಲೂ ರಿಲೀಸ್ ಮಾಡುವ ಆಲೋಚನೆ ಪ್ರಿಯಾ ಅವರಿಗೆ ಇದೆ.