ನಟಿ ಶೃತಿ ಹರಿಹರನ್ ಈ ಬಾರಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಮೀಟೂ ಗಲಾಟೆಯಿಂದಲೂ ಅಲ್ಲ, ಹೊಸ ಸಿನಿಮಾಗಳಿಂದಲೂ ಅಲ್ಲ, ವೈಯಕ್ತಿಕ ಜೀವನದಿಂದಾಗಿ. ಶೃತಿ ಹರಿಹರನ್ ತಾಯಿಯಾಗುತ್ತಿದ್ದಾರೆ.
ಮೀಟೂ ವಿವಾದದ ವೇಳೆ ಶೃತಿ ಹರಿಹರನ್ ತಮ್ಮ ಗೆಳೆಯ ರಾಮ್ರನ್ನು ಮದುವೆಯಾಗಿರುವುದು ಗೊತ್ತಾಗಿತ್ತು. ಮೀಟೂ ವಿವಾದದ ಬಳಿಕ ಶೃತಿ ಹರಿಹರನ್ ಅವರಿಗೆ ಅವಕಾಶಗಳೂ ಕಡಿಮೆಯಾಗಿದ್ದವು. ವೆಬ್ ಸಿರೀಸ್ ಮಾಡುತ್ತಿದ್ದ ಶೃತಿ ಹರಿಹರನ್ ವೈಯಕ್ತಿಕ ಬದುಕಿನಲ್ಲಿ ಮತ್ತೊಂದು ಮೆಟ್ಟಿಲು ಹತ್ತಿದ್ದಾರೆ. ತಾಯಿಯಾಗುತ್ತಿದ್ದಾರೆ.