ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಟನೆಯ ಡಿಯರ್ ಕಾಮ್ರೇಡ್ ಸಿನಿಮಾ ರಿಲೀಸ್ ಆಗುತ್ತಿದೆ. ಕನ್ನಡದಲ್ಲೂ. ಆದರೆ, ಚಿತ್ರದಲ್ಲಿ ಹೈಲೈಟ್ ಆಗುತ್ತಿರುವುದು ರಶ್ಮಿಕಾ ಮತ್ತು ವಿಜಯ್ ನಡುವಣ ಕಿಸ್ಸಿಂಗ್ ಸೀನ್ಸ್.
ಗೀತ ಗೋವಿಂದಂನಲ್ಲಿ ಒಂದು ಕಿಸ್ಸಿಂಗ್ ಸೀನ್ ಸೃಷ್ಟಿಸಿದ್ದ ಸೆನ್ಸೇಷನ್ ನೋಡಿದವರಿಗೆ ಈ ಚಿತ್ರದಲ್ಲಿ ಹಲವು ದೃಶ್ಯಗಳಿವೆ. ಈ ಲಿಪ್‍ಲಾಕ್ ಕಥೆ ಕೇಳಿದಾಗ ವಿಜಯ್ ಮತ್ತು ರಶ್ಮಿಕಾ ಇಬ್ಬರದ್ದೂ ಒಂದೇ ವಾದ.
ಲಿಪ್‍ಲಾಕ್ ಅನ್ನೋದೇ ತಪ್ಪು. ಇಷ್ಟಕ್ಕೂ ಆ ಚಿತ್ರದಲ್ಲಿ ಕಿಸ್ ಮಾಡಿರುವುದು ನಾನಲ್ಲ. ಕಿಸ್ ಮಾಡಿಸಿಕೊಂಡಿರುವುದು ರಶ್ಮಿಕಾ ಅಲ್ಲ. ಬಾಬಿ ಅನ್ನೋ ಪಾತ್ರ, ಲಿಲ್ಲಿ ಅನ್ನೋ ಪಾತ್ರಕ್ಕೆ ಮುತ್ತು ಕೊಡುತ್ತೆ. ಅಳು, ನಗು ಹೇಗೆ ಭಾವನೆಯೋ.. ಹಾಗೆಯೇ ಮುತ್ತು ಕೊಡುವುದು ಕೂಡಾ ಒಂದು ಭಾವನೆ ಎನ್ನುತ್ತಾರೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ.