` ಮಲಯಾಳಂಗೂ ಹೋಗುತ್ತಿದೆ ಯಾನ..! - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
yaana to release in malyalam too
Yaana Movie Image

ಜೈಗದೀಶ್-ವಿಜಯಲಕ್ಷ್ಮೀ ಸಿಂಗ್ ದಂಪತಿಯ ಮಕ್ಕಳು ಬೆಳ್ಳಿತೆರೆ ಪ್ರವೇಶಿಸುತ್ತಿರುವ ಚಿತ್ರ ಯಾನ. ಕನ್ನಡದಲ್ಲಿ ಇದೇ ಜುಲೈ 12ಕ್ಕೆ ರಿಲೀಸ್ ಆಗುತ್ತಿರುವ ಯಾನ, ಕನ್ನಡದಲ್ಲಷ್ಟೇ ಅಲ್ಲ, ಮಲಯಾಳಂನಲ್ಲೂ ಸದ್ದು ಮಾಡಲಿದೆ. ವಿಶೇಷವೆಂದರೆ, ಮಲಯಾಳಂ ಅಥವಾ ಬೇರೆ ಬೇರೆ ಭಾಷೆಗೆ ಡಬ್ ಮಾಡುವ ಯಾವುದೇ ಐಡಿಯಾ ಚಿತ್ರತಂಡಕ್ಕೆ ಇರಲಿಲ್ಲ. ಆದರೆ, ಯಾವಾಗ ಚಿತ್ರದ ಟ್ರೇಲರ್ ರಿಲೀಸ್ ಆಯ್ತೋ, ಕೇರಳದಿಂದ ಬೇಡಿಕೆ ಬಂತು.

ಚಿತ್ರದ ಕಥೆ, ಮಲಯಾಳಂ ಪರಿಸರಕ್ಕೂ ಹೊಂದಿಕೆಯಾಗುವ ಹಾಗಿದೆ. ಹೀಗಾಗಿ ಅಲ್ಲಿಂದ ಬೇಡಿಕೆ ಬಂತು. ಕೆಜಿಎಫ್ ಚಿತ್ರವನ್ನು ಮಲಯಾಳಂಗೆ ಡಬ್ ಮಾಡಿದ ತಂಡವೇ, ಯಾನ ಚಿತ್ರವನ್ನೂ ಡಬ್ ಮಾಡುತ್ತಿದೆ. ಜುಲೈ 12ಕ್ಕೆ ಕನ್ನಡದಲ್ಲಿ, ಜುಲೈ 19ಕ್ಕೆ ಕೇರಳದಲ್ಲಿ ಮಲಯಾಳಂ ಯಾನ ರಿಲೀಸ್ ಆಗಲಿದೆ ಎಂದು ತಿಲೀಸಿದ್ದಾರೆ ವಿಜಯಲಕ್ಷ್ಮೀ ಸಿಂಗ್.

ಯಾನ ಚಿತ್ರದ ಮೂಲಕ ವೈಭವಿ, ವೈನಿಧಿ, ವೈಸಿರಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

Geetha Movie Gallery

Damayanthi Teaser Launch Gallery