ಕನ್ನಡ ಚಿತ್ರರಸಿಕರ ಹೃದಯದಲ್ಲ ಬಸಣ್ಣಿಯಾಗಿಯೇ ಮೋಡಿ ಮಾಡಿದ ತಾನ್ಯಾ ಹೋಪ್, ಈಗ ಟಾಲಿವುಡ್ಗೆ ಹಾರಿದ್ದಾರೆ. ತೆಲುಗು ಚಿತ್ರರಂಗದ ಮಾಸ್ ಮಹಾರಾಜ ಖ್ಯಾತಿಯ ರವಿತೇಜ ಚಿತ್ರಕ್ಕೆ ತಾನ್ಯಾ ಹೋಪ್ ಹೀರೋಯಿನ್. ಕನ್ನಡದಿಂದ ಬಂದು ಪರಭಾಷಾ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವವರ ಪಟ್ಟಿಗೆ ತಾನ್ಯಾ ಹೋಪ್ ಹೊಸ ಸೇರ್ಪಡೆ.
ರವಿತೇಜ ಅಭಿನಯದ ಡಿಸ್ಕೋರಾಜ ಚಿತ್ರದಲ್ಲಿ ತಾನ್ಯಾ ನಾಯಕಿ. ಅದೇ ಚಿತ್ರದಲ್ಲಿ ಪಟಾಕಾ ನಭಾ ನಟೇಶ್ ಕೂಡಾ ಇನ್ನೊಬ್ಬ ನಾಯಕಿ. ಅಮರ್ ಚಿತ್ರದ ನಂತರ ತಾನ್ಯಾ ಹೋಪ್ ನಟಿಸುತ್ತಿರುವ ಚಿತ್ರವಿದು.