` ಕಷ್ಟಕಾಲದಲ್ಲಿ ಸಾಲ ಕೊಟ್ಟಿದ್ದವರನ್ನೆಲ್ಲ ನೆನೆದ ಕಿಚ್ಚ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep remebers who helped him in diffucult times
Sudeep

ಕಿಚ್ಚ ಸುದೀಪ್ ಈಗ ಭಾರತದ ಸ್ಟಾರ್ ನಟರಲ್ಲಿ ಒಬ್ಬರು. ಕನ್ನಡದಲ್ಲಿ ಸೂಪರ್ ಸ್ಟಾರ್. ಅವರ ಚಿತ್ರಗಳಿಗೆ ಕೋಟಿ ಕೋಟಿ ಸುರಿಯಲು ನಿರ್ಮಾಪಕರು ಕ್ಯೂನಲ್ಲಿದ್ದಾರೆ. ಆದರೆ, ಕೆಲವೇ ವರ್ಷಗಳ ಹಿಂದೆ ಹೀಗಿರಲಿಲ್ಲ. ಆಗಿನ್ನೂ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಆರಂಭದ ದಿನಗಳು. ಆ ದಿನಗಳಲ್ಲಿ ಸುದೀಪ್‍ಗೆ ಪತ್ನಿ ಪ್ರಿಯಾ ಅವರೇ ಸಾಲ ಕೊಟ್ಟಿದ್ದರಂತೆ.

ನಲ್ಲ ಚಿತ್ರವನ್ನು ಕಡಿಮೆ ಬಜೆಟ್ಟಿನಲ್ಲಿ ಮಾಡಬೇಕೆಂದು ಹೊರಟಿದ್ದೆವು. ಆದರೆ, ಬಜೆಟ್ ಏರಿಬಿಡ್ತು. ಕೈಲಿದ್ದ ಕಾಸು ಮುಗಿದಿತ್ತು. ಮೊದಲು ಅಕ್ಕನ ಒಡವೆಗಳನ್ನೆಲ್ಲ ಮಾರಿ, ಆ ಹಣವನ್ನು ಖರ್ಚು ಮಾಡಿದೆವು. ಅದೂ ಖರ್ಚಾದ ಮೇಲೆ ಪತ್ನಿ ಪ್ರಿಯಾ ಅವರಿಂದ 25 ಸಾವಿರ ಸಾಲ ತೆಗೆದುಕೊಂಡೆ. ಅದೂ ಖರ್ಚಾಗಿ ಹೋಯ್ತು. ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಬಂದಾಗ ಕೈಖಾಲಿ. ಆಗ ಮಧು ಬಂಗಾರಪ್ಪ 5 ಲಕ್ಷ ಸಾಲ ಕೊಟ್ಟರು. ಇವರು ಹಾಗೂ ಇಂತಹ ಹಲವರಿಂದಲೇ ಸುದೀಪ್ ಹೀರೋ ಆಗಿದ್ದು ಎಂದು ನೆನಪಿಸಿಕೊಂಡಿದ್ದಾರೆ ಕಿಚ್ಚ ಸುದೀಪ್.

ಸದ್ಯಕ್ಕೆ ಸುದೀಪ್ ಅವರ ಪೈಲ್ವಾನ್ ಸಿನಿಮಾ ರಿಲೀಸ್ ಹಂತದಲ್ಲಿದ್ದು, ದಿನಾಂಕ ಅಧಿಕೃತವಾಗಿ ಘೋಷಣೆಯಾಗಬೇಕಿದೆ. ನಿರ್ದೇಶಕ ಕೃಷ್ಣ ಚಿತ್ರವನ್ನು 5 ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡುತ್ತಿದ್ದಾರೆ.

Shivarjun Movie Gallery

KFCC 75Years Celebrations and Logo Launch Gallery