ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂತರ ರಿಷಬ್ ಶೆಟ್ಟಿ, ಬೆಲ್ಬಾಟಂನಲ್ಲಿ ಹೀರೋ ಆಗಿ ಮಿಂಚಿದ್ದರು. ಹೀರೋ ಆದ ಮೇಲೆ ಡೈರೆಕ್ಷನ್ ಮರೆತುಬಿಟ್ರಾ ಎಂಬ ಡೌಟ್ ಇದ್ದವರಿಗೆ ಮತ್ತೊಮ್ಮೆ ನಿರ್ದೇಶಕರ ಕ್ಯಾಪ್ ತೊಟ್ಟು ಖುಷಿ ಕೊಟ್ಟಿದ್ದಾರೆ ರಿಷಬ್ ಶೆಟ್ಟಿ. ಚಿತ್ರದ ಹೆಸರು ರುದ್ರಪ್ರಯಾಗ.
ಕಥೆ ಏನಿರಬಹುದು..? ಪೋಸ್ಟರ್ನಲ್ಲಿ ಚಿರತೆ, ಕಾಡು, ನದಿ, ವಿಧಾನಸೌಧ, ಚೆನ್ನಮ್ಮನ ಪ್ರತಿಮೆ ಎಲ್ಲ ಇದೆ. ಇದು ಪೊಲಿಟಿಕಲ್ ಡ್ರಾಮಾನಾ..? ನೋ ಐಡಿಯಾ..
ರುದ್ರಪ್ರಯಾಗದ ನರಭಕ್ಷಕ ಅನ್ನೋದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕಾದಂಬರಿ. ಇದು ಆ ಕಥೆನಾ..? ಗೊತ್ತಿಲ್ಲ.
ರುದ್ರಪ್ರಯಾಗ.. ಉತ್ತರಾಖಂಡ ರಾಜ್ಯದಲ್ಲಿರೋ ಪ್ರದೇಶ. ಅಲಕನಂದಾ, ಮಂದಾಕಿನಿ ನದಿಗಳ ಪವಿತ್ರ ಸಂಗಮ ಸ್ಥಾನ. ಇದು ಜರ್ನಿ ಸ್ಟೋರಿನಾ..
ಜಯಣ್ಣ, ಭೋಗೇಂದ್ರ ಬ್ಯಾನರ್ನಲ್ಲಿ ಬರುತ್ತಿರುವ ಚಿತ್ರದ ಬಗ್ಗೆ ಕುತೂಹಲಗಳೇನೇ ಇದ್ದರೂ, ಉತ್ತರ ಸದ್ಯಕ್ಕೆ ಗೊತ್ತಿರುವುದು ರಿಷಬ್ ಶೆಟ್ಟಿಗೆ ಮಾತ್ರ. ರಿಷಬ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಪೋಸ್ಟರ್ ಹೊರಬಿದ್ದಿದೆ.