ಕೆಜಿಎಫ್ ಚಾಪ್ಟರ್2 ಚಿತ್ರದ 2ನೇ ಹಂತದ ಶೂಟಿಂಗ್ ಶುರುವಾಗಿದೆ. ಮಿನರ್ವ ಮಿಲ್‍ನ ನರಾಚಿಯಲ್ಲಿ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ನರಾಚಿ ಎಂದರೆ ಏನೆಂದು ಕೇಳಬೇಡಿ, ಕೆಜಿಎಫ್ ಚಿತ್ರದಲ್ಲಿ ಬರೋ ಕಾಲ್ಪನಿಕ ಪ್ರದೇಶದ ಹೆಸರೇ ನರಾಚಿ.
ಮೊದಲ ಭಾಗಕ್ಕಿಂತಲೂ 2ನೇ ಭಾಗದಲ್ಲಿ ಯಶ್ ಸ್ಟೈಲಿಶ್ ಆಗಿದ್ದಾರಂತೆ. ನಿರ್ದೇಶಕ ಪ್ರಶಾಂತ್ ನೀಲ್, ಮಿನರ್ವ ಮಿಲ್‍ನಲ್ಲಿ ಹಾಕಿಸಿರುವ ಸೆಟ್‍ನಲ್ಲಿ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಕಲಾನಿರ್ದೇಶಕ ಶಿವಕುಮಾರ್ ಸೃಷ್ಟಿಸಿರುವ ನರಾಚಿ ಸೆಟ್ ಗಮನ ಸೆಳೆಯುತ್ತಿದೆ. ಉಳಿದ ಭಾಗವನ್ನು ಬೆಂಗಳೂರು ಹಾಗೂ ಮೈಸೂರಿನಲ್ಲಿ ಶೂಟಿಂಗ್ ಮಾಡಲು ನಿರ್ದೇಶಕ ಪ್ರಶಾಂತ್ ನೀಲ್ ಪ್ಲಾನ್ ಮಾಡಿದ್ದಾರೆ.