` ಪೈಲ್ವಾನ್, ಕೆಜಿಎಫ್‍ಗಿಂತ ದೊಡ್ಡ ಮೊತ್ತಕ್ಕೆ ಸೇಲ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
pailwan audio rights sold for record breaking amount
Pailwan

ಕಳೆದ ವರ್ಷ ತೆರೆ ಕಂಡು ಅಬ್ಬರಿಸಿದ್ದ ಕೆಜಿಎಫ್-ಚಾಪ್ಟರ್ 1, ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಸಿನಿಮಾ. ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ಚಿತ್ರವಾಗಿದ್ದ ಕೆಜಿಎಫ್ ಚಿತ್ರದ ಆಡಿಯೋ ಹಕ್ಕುಗಳೂ ದಾಖಲೆ ಮೊತ್ತಕ್ಕೆ ಸೇಲ್ ಆಗಿದ್ದವು.

ಈಗ ಆ ದಾಖಲೆಯನ್ನು ಸುದೀಪ್ ಅಭಿನಯದ ಪೈಲ್ವಾನ್ ಹಿಂದಿಕ್ಕಿದೆ. ಐದೂ ಭಾಷೆಗಳಲ್ಲಿ ಪೈಲ್ವಾನ್ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿರಿಸುವ ಲಹರಿ ಸಂಸ್ಥೆ, ಎಷ್ಟು ಮೊತ್ತಕ್ಕೆ ಖರೀದಿಯಾಗಿದೆ ಎನ್ನುವ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ. ಆದರೆ, ಕೆಜಿಎಫ್‍ಗಿಂತ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎನ್ನುವುದಂತೂ ಪಕ್ಕಾ.

ಜುಲೈ 27ಕ್ಕೆ ಪೈಲ್ವಾನ್ ಆಡಿಯೋ ರಿಲೀಸ್‍ಗೆ ಮುಹೂರ್ತ ಫಿಕ್ಸ್ ಆಗಿದೆ. ಅಂದಹಾಗೆ ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆ ದಿನವೂ ಜುಲೈ 27.

Shivarjun Movie Gallery

KFCC 75Years Celebrations and Logo Launch Gallery