` ಮದುವೆ ಮಂಟಪದಿಂದ ಅಪ್ಪು ನೋಡಲು ಬಂದ ವಧು-ವರರು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
newly wed couples rush to take puneeth's blessings
Newly Weds Couples Rush To Take Puneeth Rajkumar's Blessings

ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್‍ಗೆ ಫ್ಯಾಮಿಲಿ ಅಭಿಮಾನಿಗಳು ಹೆಚ್ಚು. ಆದರೆ, ಇಂತಹ ಅಭಿಮಾನಿಗಳೂ ಇದ್ದಾರೆ ಎನ್ನುವುದು ಸ್ವತಃ ಪುನೀತ್‍ಗೂ ಅಚ್ಚರಿಯೇ ಸರಿ. ಸದ್ಯಕ್ಕೆ ಪುನೀತ್ ಮೈಸೂರಿನಲ್ಲಿ ಯುವರತ್ನ ಚಿತ್ರದ ಶೂಟಿಂಗಿನಲ್ಲಿದ್ದಾರೆ. ಅಲ್ಲಿ ಒಂದು ನವಜೋಡಿ ದಿಢೀರನೆ ಪ್ರತ್ಯಕ್ಷವಾಯ್ತು.

ಪೇಟ, ಕಚ್ಚೆಪಂಚೆ, ಬಾಸಿಂಗ ಧರಿಸಿರುವ ಹುಡುಗ, ಕೊರಳಲ್ಲಿ ತಾಳಿಯ ಹರಿಸಿನದ ವಾಸನೆ ಇನ್ನೂ ಆರದ ಹುಡುಗಿಯನ್ನು ನೋಡುತ್ತಲೇ ಇವರು ಮದುವೆ ಮಂಟಪದಿಂದ ನೇರವಾಗಿ ಸೆಟ್ಟಿಗೆ ಬಂದವರು ಎನ್ನುವುದು ಗೊತ್ತಾಯ್ತು.

ತಾಳಿ ಕಟ್ಟಿದ ನಂತರ ನೇರವಾಗಿ ಪುನೀತ್ ನೋಡಲು ಬಂದಿದ್ದ ಯೋಗೇಶ್ ದಂಪತಿಗೆ ಪುಟ್ಟ ಉಡುಗೊರೆ ಕೊಟ್ಟು ಶುಭ ಹಾರೈಸಿ ಕಳಿಸಿದರು ಪುನೀತ್.