ರಿಷಬ್ ಶೆಟ್ಟಿ, ಹರಿಪ್ರಿಯಾ ಅಭಿನಯದ ಜಯತೀರ್ಥ ನಿರ್ದೇಶನದ ಬೆಲ್‍ಬಾಟಂ ಸಿನಿಮಾ, ಜಪಾನ್‍ಗೆ ಹೊರಟು ನಿಂತಿದೆ. ಕನ್ನಡದಲ್ಲಿ ಈಗಾಗಲೇ ಶತದಿನೋತ್ಸವ ಆಚರಿಸಿರುವ ಸಿನಿಮಾ ಇದು. ಸಾಮಾನ್ಯವಾಗಿ ಜಪಾನ್‍ನಲ್ಲಿ ತಮಿಳು ಚಿತ್ರಗಳಿಗೆ, ಅದರಲ್ಲೂ ರಜನಿ ಚಿತ್ರಗಳಿಗೆ ಡಿಮ್ಯಾಂಡ್ ಇದೆ. ಅಂಥಾದ್ದರಲ್ಲಿ ಈಗ ಕನ್ನಡ ಚಿತ್ರಕ್ಕೆ ಬೇಡಿಕೆ ಸೃಷ್ಟಿಯಾಗಿದೆ. ಬೆಲ್‍ಬಾಟಂ ಟೀಂ ಥ್ರಿಲ್ಲಾಗೋದು ಸಹಜವೇ ಬಿಡಿ.
ಚಿತ್ರವನ್ನು ಜಪಾನಿ ಭಾಷೆಗೆ ಡಬ್ ಮಾಡುವುದೋ ಅಥವಾ ಜಪಾನ್ ಸಬ್‍ಟೈಟಲ್ ಹಾಕುವುದೋ ಎಂಬ ಬಗ್ಗೆ ಚಿತ್ರತಂಡ ಸ್ವಲ್ಪ ಗೊಂದಲದಲ್ಲಿದೆ. ಚರ್ಚೆ ನಡೆಯುತ್ತಿದೆ. ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರ ಬೆಲ್‍ಬಾಟಂ ಟೋಕಿಯೋದಲ್ಲಿ ರಿಲೀಸ್ ಆಗಲಿದೆ.