` D/o ಪಾರ್ವತಮ್ಮ ನಿರ್ಮಾಪಕರ ಹೊಸ ಚಿತ್ರಕ್ಕೆ ಪ್ರಜ್ವಲ್ ಹೀರೋ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
prajwal devaraj's new movie with daughter of parvathamma producer
Prajwal Devaraj with Daughter Of Parvathamma Producers

ಪ್ರಜ್ವಲ್ ದೇವರಾಜ್, ಸದ್ಯಕ್ಕೆ ಸ್ಯಾಂಡಲ್‍ವುಡ್‍ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಿರುವ ಹೀರೋ. ಇನ್ಸ್‍ಪೆಕ್ಟರ್ ವಿಕ್ರಂ, ಅರ್ಜುನ್ ಗೌಡ, ಜಂಟಲ್‍ಮನ್ ಚಿತ್ರಗಳ ಜೊತೆಯಲ್ಲಿಯೇ ಇನ್ನೂ ಎರಡು ಟೈಟಲ್ ಇಡದ ಚಿತ್ರಗಳಿವೆ. ಈ 5 ಚಿತ್ರಗಳ ಜೊತೆಗೆ ಇನ್ನೂ ಒಂದು ಚಿತ್ರಕ್ಕೆ ಓಕೆ ಎಂದಿದ್ದಾರೆ ಪ್ರಜ್ವಲ್ ದೇವರಾಜ್.

ಪ್ರಜ್ವಲ್ ಅವರ ಹೊಸ ಚಿತ್ರಕ್ಕೆ ನಿರ್ಮಾಪಕರು ಶಶಿಧರ್ ಕೆ.ಎಂ. ಕೃಷ್ಣ, ಮಧು, ಸಂದೀಪ್.. ಶಶಿಧರ್‍ಗೆ ಸಾಥ್ ಕೊಡುತ್ತಿದ್ದಾರೆ. ಡಾಟರ್ ಆಫ್ ಪಾರ್ವತಮ್ಮ ಚಿತ್ರ ನಿರ್ಮಿಸಿದ್ದವರ ಚಿತ್ರಕ್ಕೆ ನಿರ್ದೇಶಕರಾಗಿರುವುದು ಕುಮಾರ್. ಶ್ರಾವಣಿ ಸುಬ್ರಮಣ್ಯ, ನಟಸಾರ್ವಭೌಮ, ಗೋವಿಂದಾಯ ನಮಃ ಚಿತ್ರಗಳಿಗೆ ಅಸಿಸ್ಟೆಂಟ್ ಆಗಿದ್ದ ಕುಮಾರ್, ಪ್ರಜ್ವಲ್ ಆವರಿಗಾಗಿಯೇ ವಿಭಿನ್ನ ಕಥೆ ಹೆಣೆದಿದ್ದಾರಂತೆ. ಅಕ್ಟೋಬರ್‍ನಲ್ಲಿ ಸಿನಿಮಾ ಶುರುವಾಗಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery