` ಕೋಮಾದಲ್ಲಿರುವ ಅಪ್ಪು ಅಭಿಮಾನಿಯ ಕೊನೆಯ ಆಸೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth's fans wish is to meet appu once
Puneeth Rajkumar

ಭೂಮಿಕಾ ಮೂರ್ತಿ, 17 ವರ್ಷದ ಹುಡುಗಿ. ಇನ್ನೂ ಕಾಲೇಜು ಓದುತ್ತಿರುವ ಈ ಯುವತಿ ಬಹು ಅಂಗಾಂಗ ವೈಫಲ್ಯದಿಂದ ಕೋಮಾಗೆ ಜಾರಿದ್ದಾರೆ. ಜೂನ್ 25ನೇ ತಾರೀಕಿನಿಂದಲೂ ಕೋಮಾದಲ್ಲಿರುವ ಈ ಯುವತಿ, ತನ್ನ ತಂದೆಗೆ ಹೇಳಿದ್ದರಂತೆ. ಅಪ್ಪಾ, ನಾನು ತುಂಬಾ ದಿನ ಬದುಕಲ್ಲ. ನನಗಾಗಿ ಸಾಲಸೋಲ ಮಾಡಿಕೊಂಡು ನರಳಬೇಡ. ಈಗಾಗಲೇ ತುಂಬಾ ಸಾಲ ಮಾಡಿದ್ದೀಯ. ಸಾಕು ಮಾಡು ಎಂದಿದ್ದ ಹುಡುಗಿ, ತನ್ನ ತಂದೆಗೆ ಕೇಳಿಕೊಂಡಿದ್ದುದು ಒಂದೇ ಒಂದು ಆಸೆ. ಸಾಯುವ ಮುನ್ನ ತಾನು ಪುನೀತ್ ರಾಜ್‍ಕುಮಾರ್‍ರನ್ನು ನೋಡಬೇಕು ಅನ್ನೋದು.

ಮಗಳ ಆಸೆಯನ್ನು ನೆರವೇರಿಸಲು ಹೇಗೋ ಪುನೀತ್ ನಂಬರ್ ಸಂಪಾದಿಸಿ ಕರೆ ಮಾಡುವ ಹೊತ್ತಿಗೆ ಪುನೀತ್ ಧಾರವಾಡದಲ್ಲಿದ್ದರು. ಶೂಟಿಂಗ್‍ನಲ್ಲಿರುವ ಪುನೀತ್, ಅಲ್ಲಿಂದಲೇ ಭೂಮಿಕಾಗೆ ವಿಡಿಯೋ ಕಾಲ್ ಮಾಡಿ, ತಾನು ಬೆಂಗಳೂರಿಗೆ ಬಂದ ತಕ್ಷಣ ನಿನ್ನನ್ನು ಭೇಟಿಯಾಗುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ. ಡೋಂಟ್‍ವರಿ, ನೀನು ಗುಣಮುಖಳಾಗುತ್ತೀಯ ಎಂದು ಸಾಂತ್ವನ ಹೇಳಿದ್ದಾರೆ.

ಇದಾದ ಮೇಲೆ ಭೂಮಿಕಾ ಕೋಮಾಗೆ ಜಾರಿದ್ದಾರೆ. ವಿಶೇಷವೆಂದರೆ, ಕೋಮಾಗೆ ಹೋಗಿರುವ ಮಗಳನ್ನು ಕಣ್ತೆರೆಸಲು ತಂದೆ ಪುನೀತ್ ವಿಡಿಯೋ ಪ್ಲೇ ಮಾಡಿದರಂತೆ. ಆಗ ಕಣ್ಣು ಮಿಟುಕಿಸಿ ನೋಡಿದ ಭೂಮಿಕಾ, ಈಗಲೂ ಕೋಮಾದಲ್ಲೇ ಇದ್ದಾರೆ.

ಪುನೀತ್ ಬಂದು ನೋಡಿ, ಮಾತನಾಡಿಸಿದರೆ ತನ್ನ ಮಗಳು ಕೋಮಾದಿಂದ ಹೊರಬರುತ್ತಾಳೆ ಎಂಬ ನಿರೀಕ್ಷೆ ಆಕೆಯ ತಂದೆಯದ್ದು.