` ನುಗ್ಗಿಕೇರಿ ಆಂಜನೇಯ ಸನ್ನಿಧಿಯಲ್ಲಿ ಪವರ್ ಸ್ಟಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth performs special pooja at hanuman temple
Puneeth Performs Anjaneya Temple

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ನುಗ್ಗಿಕೇರಿ ಆಂಜನೇಯ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ದೇವಸ್ಥಾನ ಬರುವುದು ಧಾರವಾಡದಲ್ಲಿ. ಭಕ್ತರು ಈ ಆಂಜನೇಯನಿಗೆ ಕೇಳಿಕೊಂಡಿದ್ದೆಲ್ಲ ನೆರವೇರುತ್ತೆ ಎನ್ನುವುದು ಭಕ್ತರ ನಂಬಿಕೆ. ಅದರಲ್ಲೂ ವಿದ್ಯಾರ್ಥಿಗಳು ಈ ದೇವಸ್ಥಾನಕ್ಕೆ ಕಾಲ್ನಡಿಗೆ ಹರಕೆ ಹೊರುವುದು ವಾಡಿಕೆ.

ಇದೀಗ ಯುವರತ್ನ ಚಿತ್ರದಲ್ಲಿ ಕಾಲೇಜ್ ಸ್ಟೂಡೆಂಟ್ ಆಗಿರುವ ಪುನೀತ್ ನುಗ್ಗಿಕೇರಿ ಆಂಜನೇಯ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಯುವರತ್ನ ಚಿತ್ರ ಯಶಸ್ವಿಯಾಗಲಿ ಎಂದು ಬೇಡಿಕೊಂಡಿದ್ದಾರೆ. 

ಇದೇ ದೇವಸ್ಥಾನಕ್ಕೆ ಇತ್ತೀಚೆಗೆ ಸುಮಲತಾ ಅಂಬರೀಷ್, ಅಭಿಷೇಕ್ ಭೇಟಿ ಕೊಟ್ಟಿದ್ದರು. ಮಂಡ್ಯದಲ್ಲಿ ಗೆದ್ದ ಹಿನ್ನೆಲೆಯಲ್ಲಿ ಸುಮಲತಾ ತುಲಭಾರ ಮಾಡಿಸಿದ್ದರು.