ಯಾನ, ವಿಜಯಲಕ್ಷ್ಮೀ ಸಿಂಗ್ ನಿರ್ದೇಶನದ ಹೊಸ ಸಿನಿಮಾ. ಈ ಸಿನಿಮಾದಲ್ಲಿ ಅವರ ಮೂವರು ಮಕ್ಕಳೇ ನಾಯಕಿಯರು. ವೈಭವಿ, ವೈನಿಧಿ, ವೈಸಿರಿ. ಕಾಲೇಜು ಜೀವನದ ಲವ್ ಸ್ಟೋರಿಯನ್ನಿಟ್ಟುಕೊಂಡು ಹದಿಹರೆಯದವರ ಸಿನಿಮಾ ಮಾಡಿದ್ದಾರೆ ವಿಜಯಲಕ್ಷ್ಮೀ. ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ರಾಕಿಂಗ್ ಸ್ಟಾರ್ ಯಶ್‍ಗೆ ತಕ್ಷಣ ನೆನಪಾಗಿದ್ದೇ ಆ ಸಿನಿಮಾ.
ಯಶ್ ಆರಂಭದಲ್ಲಿ ನಟಿಸಿದ ಸಿನಿಮಾ ಮೊಗ್ಗಿನ ಮನಸ್ಸು. ಯಶ್ ಮತ್ತು ರಾಧಿಕಾ ಪಂಡಿತ್‍ಗೆ ದೊಡ್ಡ ಮಟ್ಟದ ಯಶಸ್ಸು ಕೊಟ್ಟ ಶಶಾಂಕ್ ನಿರ್ದೇಶನದ ಸಿನಿಮಾ ಅದು. ಹದಿಹರೆಯದ ಪ್ರೇಮವನ್ನಿಟ್ಟುಕೊಂಡೇ ಬಂದಿರುವ ಕನ್ನಡದ ಕೆಲವೇ ಕೆಲವು ಅತ್ಯುತ್ತಮ ಚಿತ್ರಗಳಲ್ಲಿ ಮೊಗ್ಗಿನ ಮನಸ್ಸು ಕೂಡಾ ಒಂದು. ಯಾನ ಚಿತ್ರದ ಟ್ರೇಲರ್ ನೋಡಿದಾಗ ನನಗೆ ಮೊಗ್ಗಿನ ಮನಸ್ಸು ನೆನಪಾಗುತ್ತದೆ. ಯಾನ ಚಿತ್ರದ ಟ್ರೇಲರ್‍ನಲ್ಲಿ ಅದೇ ರೀತಿಯ ಹೊಸತನ ಕಾಣಿಸುತ್ತಿದೆ ಎಂದು ನೆನಪಿಸಿಕೊಂಡರು ಯಶ್.
ತಾವೇಕೆ ಯಾನ ಚಿತ್ರದ ಟ್ರೇಲರ್‍ಗೆ ಬಂದೆ ಎನ್ನುವುದಕ್ಕೂ ಕಾರಣ ನೀಡಿದ ಯಶ್, ಅಂದು ಈ ಕುಟುಂಬ ಕಟ್ಟಿ ಬೆಳೆಸಿದ ಕನ್ನಡ ಚಿತ್ರರಂಗದಲ್ಲಿ ಇಂದು ನಾವಿದ್ದೇವೆ. ಅದರ ಫಲ ನಮಗೆ ಸಿಗುತ್ತಿದೆ. ಇಂತಹ ಕುಟುಂಬದವರು ಬಂದು ಕರೆದರೆ ಇಲ್ಲ ಎನ್ನಲು ಸಾಧ್ಯವೇ ಎಂದರು ಯಶ್. ಹೌದಲ್ಲವೇ..