ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದು ನಾಗಶೇಖರ್ ಸಿನಿಮಾ. ಸಂಜಯ್ ಅಲಿಯಾಸ್ ಸಂಜು ಚಿತ್ರಕ್ಕೆ ರಚಿತಾ ಹೀರೋಯಿನ್. ರಚಿತಾ ರಾಮ್ ಟೀಂಗೆ ಬಂದಿರೋದನ್ನ ಸ್ಪಷ್ಟಪಡಿಸಿದ್ದಾರೆ ನಾಗಶೇಖರ್. ಸದ್ಯಕ್ಕೆ ನಾಗಶೇಖರ್ ಮೈನಾ ಚಿತ್ರದ ಹಿಂದಿ ವರ್ಷನ್‍ನಲ್ಲಿ ಬ್ಯುಸಿ.
ಅಂದಹಾಗೆ ಇದು ಸಂಜು ವೆಡ್ಸ್ ಗೀತಾ ಚಿತ್ರದ ಸೀಕ್ವೆಲ್ ಅಲ್ಲ. ಇದು ಮನ ಮಿಡಿಯುವ ಪ್ರೇಮಕಥೆ. ಚಿತ್ರದಲ್ಲಿ ರಚಿತಾ ರಾಮ್ ವಿಕಲಚೇತನಳ ಪಾತ್ರ ಮಾಡುತ್ತಿದ್ದಾರೆ. ಅಂದರೆ ಅಂಧಳ ಪಾತ್ರ ಎಂದಿದ್ದಾರೆ ನಾಗಶೇಖರ್. ಸಿನಿಮಾ ವರ್ಷದ ಕೊನೆಗೆ ಶುರುವಾಗಲಿದೆ.