ಬಿಡುಗಡೆಯಾದ ದಿನದಿಂದಲೂ ಸುದ್ದಿಯಲ್ಲಿದೆ ಐ ಲವ್ ಯೂ. ಸಿನಿಮಾ ಡಿಫರೆಂಟ್ ಆಗಿ ಪ್ರೇಕ್ಷಕರಿಗೆ ಇಷ್ಟವಾಗಿದ್ದು ಒಂದು ಕಾರಣವಾದರೆ, ರಚಿತಾ ರಾಮ್ ಉಪೇಂದ್ರ ಅಭಿನಯದ ಬೋಲ್ಡ್ ದೃಶ್ಯಗಳ ವಿವಾದ ಇನ್ನೊಂದು ಕಾರಣ. ಇದೆಲ್ಲದರ ಮಧ್ಯೆ ಗೆಲುವಿನ ನಗು ಬೀರಿರುವುದು ನಿರ್ದೇಶಕ ಕಂ ನಿರ್ಮಾಪಕ ಆರ್. ಚಂದ್ರು.
ಕನ್ನಡ ಮತ್ತು ತೆಲುಗು, ಎರಡೂ ಭಾಷೆಯಲ್ಲಿ ಏಕಕಾಲದಲ್ಲಿ 3 ರಾಜ್ಯಗಳಲ್ಲಿ ರಿಲೀಸ್ ಆದ ಐ ಲವ್ ಯೂ ಗಳಿಕೆ 22 ಕೋಟಿಯ ಗಡಿ ದಾಟಿದೆ. ಅದ್ಧೂರಿ ಸಿನಿಮಾ ಮಾಡಿದ ಚಂದ್ರು, ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಇದರ ಜೊತೆಗೆ ಥಿಯೇಟರ್‍ಗಳ ಸಂಖ್ಯೆ ಹೆಚ್ಚುತ್ತಿದೆ. ಈ ವಾರದ ಅಂತ್ಯಕ್ಕೆ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎನ್ನುತ್ತಿವೆ ಚಿತ್ರತಂಡದ ಮೂಲಗಳು.