` ಕಥೆ ಹೇಳಿ.. 1 ಲಕ್ಷ ರೂ. ಗೆಲ್ಲಿ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
producer k manju starts competition for writers
K Manju

ಕಥೆ ಹೇಳಿ.. ಅದು ಚೆನ್ನಾಗಿರಬೇಕು. ಕಥೆಯಲ್ಲಿ ಹೊಸತನವಿರಬೇಕು. ಈಗಿನ ಟ್ರೆಂಡ್‍ಗೆ ಹೊಂದುವಂತಿರಬೇಕು. ಕಥೆ ಇಷ್ಟವಾದರೆ, ನಿಮಗೆ 1 ಲಕ್ಷ ರೂ. ಇದು ನಿರ್ಮಾಪಕ ಕೆ.ಮಂಜು ಆಫರ್. ಅದಕ್ಕಾಗಿಯೇ ಅವರೀಗ ಕೆ.ಮಂಜು ಸ್ಕ್ರಿಪ್ಟ್ ಯೋಜನೆ ಆರಂಭಿಸಿದ್ದಾರೆ.

ಬರಹಗಾರರು ಕಳುಹಿಸುವ ಕಥೆಗಳನ್ನು ಆಯ್ಕೆ ಮಾಡಲೆಂದೇ ಒಂದು ತಜ್ಞರ ಸಮಿತಿ ಇರಲಿದೆ. ಕಥೆ, ಕಾದಂಬರಿ, ನಾಟಕ, ಲೇಖನ ಅಥವಾ ಬೇರಾವುದೋ ಸಿನಿಮಾಗಳನ್ನು ಆಧರಿಸಿ ಕಥೆ ಇರಬಾರದು. ಅದು ಅಪ್ಪಟ ಸ್ವಮೇಕ್ ಆಗಿರಬೇಕು ಎನ್ನುವುದು ಒಂದು ಷರತ್ತು. ಕಥೆಯನ್ನು ಯಾರು ಬೇಕಾದರೂ ಕಳುಹಿಸಬಹುದು.

ಕಥೆ, ಚಿತ್ರಕಥೆಯನ್ನು ಬೌಂಡ್ ಮಾಡಿ ಕಳಿಸಿರಬೇಕು. ಅಷ್ಟೇ ಅಲ್ಲ, ಕಥೆಯ ಸಾರಾಂಶವನ್ನು ಎರಡು ಪುಟಗಳಲ್ಲಿ ಸಂಕ್ಷಿಪ್ತವಾಗಿ ಟೈಪ್ ಮಾಡಿರಬೇಕು. ಕೈಬರಹದಲ್ಲಿರಬಾರದು ಎನ್ನುವ ಮಂಜು, ಕಥೆಗಳನ್ನು ತಲುಪಿಸಬೇಕಾದ ವಿಳಾಸವನ್ನೂ ಕೊಟ್ಟಿದ್ದಾರೆ.

ವಿಳಾಸ ಇಲ್ಲಿದೆ :

ಕೆ.ಮಂಜು, ನಂ.26

7ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ

ಬೆಂಗಳೂರು - 560041

ವಿ.ಸೂ. - ಕಥೆಯನ್ನು ಕಳುಹಿಸಲು ಕೊನೆಯ ದಿನ ಜುಲೈ 19.

#

I Love You Movie Gallery

Rightbanner02_butterfly_inside

Yaana Movie Gallery