ಕೊಡಗು, ದೇಶಕ್ಕೆ ಇಬ್ಬರು ಜನರಲ್‍ಗಳನ್ನು ಕೊಟ್ಟ ಊರು. ಕಾರಿಯಪ್ಪ ಮತ್ತು ತಿಮ್ಮಯ್ಯ. ಕೊಡಗು, ಕರ್ನಾಟಕಕ್ಕೆ ಕಾವೇರಿಯನ್ನು ಕೊಟ್ಟ ಊರು. ಕಾಫಿ, ಕಿತ್ತಳೆಯನ್ನು ಕೊಟ್ಟಿರುವ ಈ ಸುಂದರ ನಗರಿ, ಸೌಂದರ್ಯವತಿಯರ ತವರೂರು ಎಂದರೆ ತಪ್ಪಿಲ್ಲ. ಇಂತಹ ಕೊಡಗು ಈಗ ಕನ್ನಡಕ್ಕೆ ಇನ್ನೊಬ್ಬ ಚೆಲುವೆಯನ್ನು ಕೊಟ್ಟಿದೆ.
ಜೋಗಿ ಪ್ರೇಮ್ ಅವರ ಏಕ್ ಲವ್ ಯಾ ಚಿತ್ರದಲ್ಲಿ ನಾಯಕಿಯಾಗಿರುವ ರೀಷ್ಮಾ ನಾಣಯ್ಯ, ಕೊಡಗಿನಿಂದ ಬರುತ್ತಿರುವ ಹೊಸ ಚೆಲುವೆ.
ಲಿಸ್ಟು ನೋಡಿದರೆ ಮಾರುದ್ದ ಇದೆ. ಹೆಚ್ಚೂ ಕಡಿಮೆ ಒಂದು ದಶಕ ಕನ್ನಡ ಚಿತ್ರರಂಗವನ್ನು ಆಳಿದ ಪ್ರೇಮಾ ಕೊಡಗಿನವರು. ಡೈಸಿ ಬೋಪಣ್ಣ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ಅನು ಪೂವಮ್ಮ, ಪ್ರಜ್ವಲ್ ಪೂವಯ್ಯ, ಕೃಷಿ ತಾಪಂಡ, ದಿಶಾ ಪೂವಯ್ಯ, ಟೀನಾ ಪೊನ್ನಪ್ಪ, ರಾಗವಿ.. ಹೀಗೆ ಪಟ್ಟಿ ತುಂಬಾ ದೊಡ್ಡದು.
ಕನ್ನಡ ಚಿತ್ರರಂಗದಿಂದ ಬಂದು ದಕ್ಷಿಣ ಭಾರತವನ್ನೇ ವ್ಯಾಪಿಸಿಕೊಂಡಿರುವ ಸೌಥ್ ಇಂಡಿಯಾ ಕ್ರಷ್ ರಶ್ಮಿಕಾ ಮಂದಣ್ಣ ಕೂಡಾ ಕೊಡವರ ಹುಡುಗಿಯೇ..