ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ರಿಲೀಸ್ ಆಗಿ ದೂಳೆಬ್ಬಿಸುತ್ತಿರುವ ಚಿತ್ರ ಐ ಲವ್ ಯೂ. ಆರ್.ಚಂದ್ರು ನಿರ್ದೇಶನದ ಸಿನಿಮಾ ಹೌಸ್‍ಫುಲ್ ಆಗಿ ಮುನ್ನುಗ್ಗುತ್ತಿರುವಾಗಲೇ, ಚಿತ್ರಕ್ಕೆ ಕಾಲಿವುಡ್‍ನಿಂದ ಡಿಮ್ಯಾಂಡ್ ಸೃಷ್ಟಿಯಾಗಿದೆ. ಬೆಂಗಳೂರಿಗೆ ಬಂದು ಸಿನಿಮಾ ನೋಡಿದ ನಿರ್ಮಾಪಕ ಸಂಜಯ್ ಕಾಲ್ವಾನಿ, ತಮಿಳಿನಲ್ಲಿ ಡೈರೆಕ್ಷನ್ ಮಾಡುವಂತೆ ಆರ್.ಚಂದ್ರುಗೆ ಆಫರ್ ಕೊಟ್ಟಿದ್ದಾರೆ. ಅಡ್ವಾನ್ಸ್‍ನ್ನೂ ಕೊಟ್ಟಿದ್ದಾರೆ.
ಹೌದು, ಚಿತ್ರವನ್ನು ತಮಿಳಿನಲ್ಲಿ ಮಾಡುತ್ತಿರುವುದು ನಿಜ. ನಾನೇ ಅಲ್ಲಿಯೂ ನಿರ್ದೇಶಕ. ಅಡ್ವಾನ್ಸ್ ಕೂಡಾ ಕೊಟ್ಟಿದ್ದಾರೆ ಎಂದಿರುವ ಚಂದ್ರು, ತಮಿಳಿನ ನೇಟಿವಿಟಿಗೆ ತಕ್ಕಂತೆ ಸ್ಕ್ರಿಪ್ಟ್‍ನಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲಿದ್ದಾರಂತೆ. ಉಪೇಂದ್ರ ಅವರ ಪಾತ್ರದಲ್ಲಿ ವಿಜಯ್ ಸೇತುಪತಿ ಅಥವಾ ಕಾರ್ತಿ ನಟಿಸಬಹುದು ಎಂಬ ಸುದ್ದಿಯಿದೆ.
ಈಗಾಗಲೇ ತೆಲುಗಿನಲ್ಲಿ ಕೃಷ್ಣಮ್ಮ ಕಲಿಪಿ ಇದ್ದರೇನಿ ಚಿತ್ರ ನಿರ್ದೇಶಿಸಿರುವ ಚಂದ್ರು, ಐ ಲವ್ ಯೂ ಮೂಲಕ ತಮಿಳಿಗೂ ಕಾಲಿಡಲಿದ್ದಾರೆ. ಉಪೇಂದ್ರ, ರಚಿತಾರಾಮ್, ಸೋನುಗೌಡ ಅಭಿನಯದ ಐ ಲವ್ ಯೂ ಸಿನಿಮಾ, ಕೌಟುಂಬಿಕ ಪ್ರೇಕ್ಷಕರಿಗೆ ಇಷ್ಟವಾಗಿರುವುದೇ ಚಿತ್ರದ ಯಶಸ್ಸಿಗೆ ಕಾರಣ