` ಸಲ್ಮಾನ್, ಶಾರುಕ್, ಅಜಯ್ ದೇವಗನ್, ನಾಗಾರ್ಜುನ.. ನೋಡಲು ಕಾಯ್ತಿರೋ ಕನ್ನಡ ಸಿನಿಮಾ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bollywood stars waiting to watch rustum
Rustum Movie Image

ಈ ಚಿತ್ರವನ್ನೊಮ್ಮೆ ನೋಡಬೇಕು. ರಿಲೀಸ್‍ಗೂ ಮೊದಲೇ ನೋಡಬೇಕು ಎಂದು ಬಾಲಿವುಡ್, ಟಾಲಿವುಡ್ ಸ್ಟಾರ್‍ಗಳೆಲ್ಲ ಕಾಯ್ತಿರೋ ಸಿನಿಮಾ ರುಸ್ತುಂ. ಚಿತ್ರವನ್ನು ನೋಡಬೇಕು ಎಂದು ಸ್ವತಃ ಶಾರುಕ್, ಸಲ್ಮಾನ್, ಅಜಯ್ ದೇವಗನ್, ಪ್ರಭುದೇವ, ನಾಗಾರ್ಜುನ.. ಮೊದಲಾದವರು ಆಸಕ್ತಿ ತೋರಿಸಿದ್ದಾರೆ. ಅದನ್ನು ಚಿತ್ರದ ನಿರ್ದೇಶಕ ರವಿವರ್ಮ ಸ್ಪಷ್ಟಪಡಿಸಿದ್ದಾರೆ.

ರುಸ್ತುಂ, ರವಿ ವರ್ಮ ನಿರ್ದೇಶನದ ಮೊದಲ ಸಿನಿಮಾ. ಆದರೆ, ಸಾಹಸ ನಿರ್ದೇಶಕರಾಗಿ ಬಾಲಿವುಡ್‍ನಲ್ಲಿ ಹೆಸರು ಮಾಡಿರೋ ರವಿವರ್ಮ ನಿರ್ದೇಶನದ ಚೊಚ್ಚಲ ಚಿತ್ರದ ಬಗ್ಗೆ ಬಾಲಿವುಡ್ ಸ್ಟಾರ್‍ಗಳಿಗೂ ಕುತೂಹಲವಿದೆ. ಜೊತೆಗೆ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ಕೂಡಾ ನಟಿಸಿದ್ದಾರೆ.

ಶಿವರಾಜ್‍ಕುಮಾರ್, ಶ್ರದ್ಧಾ ಶ್ರೀನಾಥ್, ವಿವೇಕ್ ಒಬೇರಾಯ್, ರಚಿತಾ ರಾಮ್, ಮಯೂರಿ ನಟಿಸಿರುವ ಚಿತ್ರ ಜೂನ್ 28ಕ್ಕೆ ರಿಲೀಸ್ ಆಗುತ್ತಿದೆ.

Ayushmanbhava Movie Gallery

Ellidhe Illitanaka Movie Gallery