ಉಪ್ಪಿ-ರಚಿತಾರ ಬೋಲ್ಡ್ ಆ್ಯಕ್ಟಿಂಗ್, ಐ ಲವ್ ಯೂ ರಿಲೀಸ್ ವೇಳೆ ಭಾರಿ ಸದ್ದು ಮಾಡಿದ್ದ ವಿಷಯ. ಒಂದು ಹಂತದಲ್ಲಂತೂ ಅದು ಪ್ರಿಯಾಂಕಾ ಉಪೇಂದ್ರ ಮತ್ತು ರಚಿತಾ ರಾಮ್ ನಡುವೆ ಸಣ್ಣದೊಂದು ಸಮರಕ್ಕೂ ಸಾಕ್ಷಿಯಾಗಿತ್ತು. ಪಡ್ಡೆಗಳ ನಿದ್ದೆಗೆಡಿಸಿದ್ದ ರಚಿತಾ ರಾಮ್, ಇನ್ನು ಮುಂದೆ ಇಂತಹ ದೃಶ್ಯಗಳಲ್ಲಿ ನಟಿಸಲ್ಲ ಎಂದಿದ್ದರು. ಇಷ್ಟೆಲ್ಲ ಆಗಿ, ಸಿನಿಮಾ ಹಿಟ್ ಆಗಿದೆ. ರಚಿತಾಗೆ ಅತಿದೊಡ್ಡ ಸರ್ಟಿಫಿಕೇಟ್ ಸಿಕ್ಕಿದೆ. ಅದು ಅವರ ತಾಯಿ ಹಾಗೂ ಅಕ್ಕನ ಮೆಚ್ಚುಗೆಯ ಸರ್ಟಿಫಿಕೇಟ್.
ಐ ಲವ್ ಯೂ ಸಿನಿಮಾ ನೋಡಿದ ರಚಿತಾ ರಾಮ್ ತಾಯಿ ಹಾಗೂ ಅಕ್ಕ ನಿತ್ಯಾ ರಾಮ್ ಒಟ್ಟಿಗೇ ನೋಡಿದ್ದಾರೆ. ಇದು ನನ್ನ ಮಗಳ ಸಿನಿಮಾ ಎನ್ನುವುದಕ್ಕಿಂತ ಉಪೇಂದ್ರ-ರಚಿತಾ ರಾಮ್ ಸಿನಿಮಾ ಎಂದು ನೋಡೋಕೆ ಹೋಗಿದ್ದೆವು ಎಂದಿರೋ ಇಬ್ಬರೂ ಕೂಡಾ ರಚಿತಾರ ಅಭಿನಯ ಸೂಪರ್ ಎಂದಿದ್ದಾರೆ. ಅದರಲ್ಲೂ ಆ ಹಾಡಿನಲ್ಲಿ ಅದ್ಭುತ ಪರ್ಫಾಮೆನ್ಸ್. ಎಕ್ಸ್‍ಪ್ರೆಷನ್ಸ್ ಚಿಂದಿ. ಯೂ ಕಿಲ್ಡ್ ಇಟ್ ಎಂದು ಹೊಗಳಿದ್ದಾರೆ.
ಅಮ್ಮನೇ ಒಪ್ಪಿಕೊಂಡ ಮೇಲೆ ಇನ್ಯಾರು ಏನಂದರೂ ನನಗೆ ಚಿಂತೆ ಇಲ್ಲ ಎಂದಿದ್ದಾರೆ ರಚಿತಾ ರಾಮ್. ನಿರ್ದೇಶಕ ಹಾಗೂ ನಿರ್ಮಾಪಕ ಆರ್.ಚಂದ್ರು ತುಂಬುತ್ತಿರುವ ಗಲ್ಲಾಪೆಟ್ಟಿಗೆ ನೋಡಿ ಖುಷಿಯಾಗಿದ್ದಾರೆ.