` ರಜನಿಕಾಂತ್-ಬಹದ್ದೂರ್ ಗೆಳೆತನವೇ ಈ ಸಿನಿಮಾ ಕಥೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
one way has story of rajanikanth
One Way Movie Image

ರಜನಿಕಾಂತ್, ಇಂಡಿಯಾದ ಸೂಪರ್ ಸ್ಟಾರ್. ರಾಜ್ ಬಹದ್ದೂರ್, ರಜನಿಕಾಂತ್‍ರ ಗೆಳೆಯ. ಅವರ ಗೆಳೆತನಕ್ಕೆ ಅವರ ವಯಸ್ಸಿನಷ್ಟೇ ಇತಿಹಾಸವಿದೆ. ರಜನಿ, ಸೂಪರ್ ಸ್ಟಾರ್ ಆದ ನಂತರವೂ ಬಹದ್ದೂರ್ ಜೊತೆಗಿನ ಗೆಳೆತನ ಉಳಿದುಕೊಂಡಿದ್ದು ಹೇಗೆ ಅನ್ನೋದು ಹಲವರನ್ನು ಕಾಡುವ ಪ್ರಶ್ನೆ. ಈಗ ಆ ಗೆಳೆತನದ ಕಥೆಯೇ ಸಿನಿಮಾ ಆಗಿದೆ. ಅದು ಒನ್ ವೇ.

ಕೊಟ್ಲಲ್ಲಪ್ಪೋ ಕೈ ಚಿತ್ರವನ್ನು ನಿರ್ದೇಶನ ಮಾಡಿದ್ದ ರಿಷಿ, ಈ ಚಿತ್ರಕ್ಕೆ ನಿರ್ದೇಶಕ. ರಿಷಿ ಎಂದರೆ ತಕ್ಷಣ ನೆನಪಾಗುವುದು ಒಳಿತು ಮಾಡೊ ಮನುಷ, ನೀ ಇರೋದು 3 ದಿವಸ ಹಾಡು ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿಗಳ ಕುರಿತು ರಚಿಸಿದ್ದ ಹಾಡು. ಆ ಎರಡು ಹಾಡುಗಳ ಮೂಲಕ ಕನ್ನಡಿಗರಿಗೆ ಪರಿಚಯವಾದ ರಿಷಿ, ಒಳಿತು ಮಾಡು ಮನುಷ ಹಾಡನ್ನು ಈ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಚಿತ್ರ ಶೀಘ್ರದಲ್ಲೇ ತೆರೆ ಕಾಣಲಿದೆ.

Ayushmanbhava Movie Gallery

Ellidhe Illitanaka Movie Gallery