ಸಂಜು ವೆಡ್ಸ್ ಗೀತಾ, 2011ರಲ್ಲಿ ತೆರೆ ಕಂಡಿದ್ದ ಸಿನಿಮಾ. ಶ್ರೀನಗರ ಕಿಟ್ಟಿ, ರಮ್ಯಾ ಅಭಿನಯದ ಚಿತ್ರ ಸೂಪರ್ ಹಿಟ್ ಆಗಿತ್ತು. ನಾಗಶೇಖರ್ ನಿರ್ದೇಶನದ ಆ ಚಿತ್ರ, ನಿರ್ದೇಶಕರನ್ನೂ ಸ್ಟಾರ್ ಮಾಡಿತ್ತು. ಇತ್ತೀಚೆಗಷ್ಟೇ ಅಮರ್ ಚಿತ್ರ ಮುಗಿಸಿ, ರಿಲೀಸ್ ಮಾಡಿರುವ ನಾಗಶೇಖರ್, ಸಂಜು ವೆಡ್ಸ್ ಗೀತಾ ಚಿತ್ರದ ಪಾರ್ಟ್ 2 ಮಾಡುತ್ತಿದ್ದಾರಾ..?
ಸಂಜಯ್ ಅಲಿಯಾಸ್ ಸಂಜು ಅನ್ನೋ ಹೊಸ ಚಿತ್ರ ಕೈಗೆತ್ತಿಕೊಂಡಿರುವ ನಾಗಶೇಖರ್, ಅಂಥದ್ದೊಂದು ಸುಳಿವು ಕೊಟ್ಟಿದ್ದಾರೆ. ಸತ್ಯ ಕಥೆ ಆಧರಿತ ಚಿತ್ರ ಎಂದು ದೊಡ್ಡದಾಗಿ ಬಿಂಬಿಸಿರುವ ನಾಗಶೇಖರ್, ಸತ್ಯ ಹೆಗಡೆ ಅವರನ್ನು ಛಾಯಾಗ್ರಹಕರಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ವಿ.ಶ್ರೀಧರ್ ಸಂಗೀತ, ರವಿವರ್ಮ ಸಾಹಸ ಇರುವ ಚಿತ್ರದ ಕಥೆಯ ಬಗ್ಗೆ ಆಗಲೀ, ತಾರಾಗಣದ ಬಗ್ಗೆ ಆಗಲಿ ಗುಟ್ಟು ಬಿಟ್ಟುಕೊಟ್ಟಿಲ್ಲ.