2 ವರ್ಷಗಳ ನಂತರ ತೆರೆ ಕಂಡಿರುವ ಉಪೇಂದ್ರ ಅಭಿನಯದ ಸಿನಿಮಾ ಐ ಲವ್ ಯೂ. ಬಾಕ್ಸಾಫೀಸ್ನ್ನು ಅಕ್ಷರಶಃ ಲೂಟಿ ಹೊಡೆಯುತ್ತಿದೆ. ಕರ್ನಾಟಕ, ಆಂಧ್ರ, ತೆಲಂಗಾಣ ಎಲ್ಲ ಕಡೆಯಲ್ಲೂ ಒಂದೇ ರೆಸ್ಪಾನ್ಸ್. ಚಿತ್ರ ಸಕ್ಸಸ್.
ಇದೇ ಕಾರಣಕ್ಕಾಗಿ ಚಿತ್ರತಂಡ ಸಕ್ಸಸ್ ಮೀಟ್ ನಡೆಸಿತ್ತು. ಆರ್.ಚಂದ್ರು ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡರೆ, ಉಪೇಂದ್ರ ಎ ಚಿತ್ರ ರಿಲೀಸ್ ಮಾಡುವಾಗ ಅನುಭವಿಸಿದ್ದ ಕಷ್ಟಗಳನ್ನು ಮೆಲುಕು ಹಾಕಿದರು.
ಇನ್ನು ಬಿಡುಗಡೆಗೆ ಮುನ್ನ ಭಾರಿ ಸಂಚಲನ ಸೃಷ್ಟಿಸಿದ್ದ ಉಪೇಂದ್ರ, ರಚಿತಾ ರಾಮ್ ಹಾಟ್ ಸಾಂಗ್, ನಿರ್ದೇಶಕರು ಹೇಳಿದಂತೆ ಬಿಡುಗಡೆಯಾದ ಮೇಲೆ ತಣ್ಣಗಾಗಿದೆ. ಚಿತ್ರದಲ್ಲಿ ಬಂದು ಹೋಗುವ ಆ ದೃಶ್ಯ, ಚಿತ್ರದ ಕಥೆಗೆ ಬೇಕಿತ್ತು ಎಂದಿದ್ದರು. ಅಷ್ಟೇ ಅಲ್ಲ, ಇನ್ನೊಬ್ಬ ನಾಯಕಿ ಸೋನು ಗೌಡ ಅವರ ಪಾತ್ರವನ್ನೇಕೆ ಬಿಡುಗಡೆಗೆ ಮುನ್ನ ಸೀಕ್ರೆಟ್ ಆಗಿ ಇಡಲಾಯ್ತು ಎಂಬುದಕ್ಕೂ ಚಿತ್ರದಲ್ಲಿ ಉತ್ತರ ಸಿಕ್ಕಿದೆ.
ಸದ್ಯಕ್ಕೆ ಆರ್.ಚಂದ್ರು ಹ್ಯಾಪಿ ಹ್ಯಾಪಿ. ಉಪೇಂದ್ರ, ರಚಿತಾ ರಾಮ್, ಸೋನು ಗೌಡ ಎಲ್ಲರಿಗೂ ಖುಷಿಯೋ ಖುಷಿ.