` ಸಾಧು ಕೋಕಿಲ ನನ್ನ ಗುರು - ಎಸ್‍ಪಿ ಬಾಲಸುಬ್ರಹ್ಮಣ್ಯಂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
spb inaugurates sadhu kokila's loop studios
Sadhu Kokila, SPB, Suraag

ಸಂಗೀತ ನಿರ್ದೇಶಕ ಸಾಧು ಕೋಕಿಲಾಗೆ ಗುರುವಿನ ಸ್ಥಾನ ನೀಡಿದ್ದಾರೆ ಎಸ್.ಪಿ.ಬಾಲಸುಬ್ರಹ್ಮಣ್ಯಂ. ಸಾಧುಗೆ ಈ ಗೌರವ ನೀಡಿದ್ದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. ಸಾಧು ಅವರಷ್ಟೇ ಅಲ್ಲ, ನನಗೆ ಹಾಡಲು ಅವಕಾಶ ನೀಡುವ ಪ್ರತಿಯೊಬ್ಬ ಸಂಗೀತ ನಿರ್ದೇಶಕರೂ ನನಗೆ ಗುರುಗಳೇ. ನಾನು ಹೇಗೆ ಹಾಡಬೇಕು ಎನ್ನುವುದನ್ನು ನನಗೆ ಮೊದಲು ಹೇಳಿಕೊಡುವುದೇ ಸಂಗೀತ ನಿರ್ದೇಶಕರು. ಹೀಗಾಗಿ ಸಾಧು ಕೋಕಿಲ ಕೂಡಾ ನನಗೆ ಗುರು ಎಂದಿದ್ದಾರೆ ಎಸ್‍ಪಿಬಿ.

ಸಾಧು ಕೋಕಿಲ ಹೊಸ ಸ್ಟುಡಿಯೋ ಆರಂಭಿಸಿದ್ದು, ಅದನ್ನು ತಮ್ಮ ಅಚ್ಚುಮೆಚ್ಚಿನ ಗಾಯಕ ಎಸ್‍ಪಿಬಿಯವರಿಂದಲೇ ಉದ್ಘಾಟನೆ ಮಾಡಿಸಿದ್ದಾರೆ ಸಾಧು. ಆ ಸ್ಟುಡಿಯೋದಲ್ಲಿ ಗ್ರಾಫಿಕ್ಸ್, ಮ್ಯೂಸಿಕ್, ಡಬ್ಬಿಂಗ್, ರೆಕಾರ್ಡಿಂಗ್ ಎಲ್ಲವೂ ನಡೆಯಲಿದೆ.

Babru Teaser Launch Gallery

Odeya Audio Launch Gallery