` ಶಿವಣ್ಣಗೆ ಲಂಡನ್‍ನಲ್ಲಿ ಆಪರೇಷನ್..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
is shivanna flying to london for an operation
Shivarajkumar

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಇಂಗ್ಲೆಂಡ್‍ಗೆ ತೆರಳಲಿದ್ದಾರೆ. ಕೆಲವೇ ದಿನಗಳಲ್ಲಿ ಲಂಡನ್‍ನಲ್ಲಿ ಭುಜದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ ಜುಲೈ 6ರಂದು ಶಿವಣ್ಣ ಲಂಡನ್‍ಗೆ ತೆರಳಲಿದ್ದಾರೆ.

57ರ ಹರೆಯದ ಶಿವಣ್ಣ, ಇವತ್ತಿಗೂ ಎನರ್ಜೆಟಿಕ್ ಹೀರೋ. ಡ್ಯಾನ್ಸು, ಫೈಟಿಂಗುಗಳಲ್ಲಿ ಮಿಂಚಿನಂತೆ ಸರಿದಾಡುವ ಶಿವಣ್ಣ, ಎನಿಟೈಂ ಬ್ಯುಸಿ. 

ಸದ್ಯಕ್ಕೆ ಆನಂದ್ ಶೂಟಿಂಗ್‍ನಲ್ಲಿರೋ ಶಿವರಾಜ್ ಕುಮಾರ್, ಇತ್ತೀಚೆಗಷ್ಟೇ ಭಜರಂಗಿ 2 ಫೋಟೋಶೂಟ್ ಮುಗಿಸಿದ್ದಾರೆ. ಜೂನ್ 20ರ ನಂತರ ಭಜರಂಗಿ 2 ಚಿತ್ರದ ಫಸ್ಟ್ ಶೆಡ್ಯೂಲ್ ಶುರುವಾಗಲಿದ್ದು, ಅದನ್ನು ಮುಗಿಸಿ ಜುಲೈ 6 ರಂದು ಇಂಗ್ಲೆಂಡ್‍ಗೆ ತೆರಳಲಿದ್ದಾರಂತೆ.

ಇದು ಪಕ್ಕಾ ಆದರೆ, ಜುಲೈ 12ರ ಹುಟ್ಟುಹಬ್ಬದ ದಿನ ಶಿವಣ್ಣ ರಾಜ್ಯದಲ್ಲಿ ಇರೋದಿಲ್ಲ. ವಾಪಸ್ ಆಗುವುದು ಜುಲೈ ತಿಂಗಳ ಕೊನೆಗೆ.

#

I Love You Movie Gallery

Rightbanner02_butterfly_inside

Yaana Movie Gallery