` ನಾನೆಲ್ಲಿ ಹಾಗೆ ಹೇಳಿದ್ದೇನೆ..? - ಪ್ರಿಯಾಂಕಾ ಉಪೇಂದ್ರಗೆ ರಚಿತಾ ರಾಮ್ ಪ್ರಶ್ನೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
rachita clarifies on her statement regarding bold scenes
Rachita Ram

ಪ್ರಿಯಾಂಕಾ ಉಪೇಂದ್ರ ರಚಿತಾ ರಾಮ್ ಬಗ್ಗೆ, ಅವರ ಮಾತುಗಳ ಬಗ್ಗೆ ಸಿಟ್ಟಾಗಿರುವುದಕ್ಕೆ ರಚಿತಾ ರಾಮ್ ಹೇಳಿರೋದಿಷ್ಟು. 

ನಾನು ಎಲ್ಲಿಯೂ ಆ ಹಾಡನ್ನು ಉಪ್ಪಿ ಸರ್ ನಿರ್ದೇಶನ ಮಾಡಿದ್ದಾರೆ ಎಂದು ಹೇಳಿಲ್ಲ. ಆ ಪಾತ್ರ ಮಾಡಬಾರದಾಗಿತ್ತು ಎಂದೂ ಹೇಳಿಲ್ಲ. ಆ ರೀತಿಯ ಹೇಳಿಕೆಗಳನ್ನು ನಾನು ಕೊಟ್ಟಿಲ್ಲ.

ನಾನು ಹೇಳಿದ್ದು ಆ ಒಂದು ಸೀನ್ ಮಾಡುವಾಗ ಕಂಫರ್ಟ್ ತುಂಬಾ ಮುಖ್ಯ ಎಂದು. ಆ ರೀತಿಯ ಕಂಫರ್ಟ್ ಉಪ್ಪಿ ಸರ್ ಕಡೆಯಿಂದ ಚೆನ್ನಾಗಿದ್ದ ಕಾರಣಕ್ಕೆ ಸುಲಭವಾಗಿ ನಟಿಸಲು ಸಾಧ್ಯವಾಯಿತು ಎಂದಿದ್ದೇನೆ. ಅಷ್ಟೆ.

ಇನ್ನು ಮುಂದೆ ಬೋಲ್ಡ್ ಪಾತ್ರ ಮಾಡಲ್ಲ ಎಂದಿದ್ದು ಐ ಲವ್ ಯೂ ಚಿತ್ರದ ಪಾತ್ರದ ಕುರಿತು ಅಲ್ಲ. ನನ್ನ ಫ್ಯಾನ್ಸ್‍ಗೆ ಅಂತಹ ಪಾತ್ರ ಇಷ್ಟ ಆಗಲ್ಲ. ಹಾಗಾಗಿ ಇನ್ನು ಮುಂದೆ ಅಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಳ್ಳಲ್ಲ ಎಂದು. ಅಷ್ಟೇ ಹೊರತು ಮತ್ತೇನಿಲ್ಲ.

ಇದೇ ಶುಕ್ರವಾರ ತೆರೆ ಕಾಣುತ್ತಿರುವ ಐ ಲವ್ ಯೂ ಚಿತ್ರದಲ್ಲಿ ಉಪೇಂದ್ರ & ರಚಿತಾ ರಾಮ್ ಹಸಿಬಿಸಿ ದೃಶ್ಯಗಳು ಹವಾ ಎಬ್ಬಿಸಿವೆ. ರಚಿತಾ ರಾಮ್ ಇದೇ ಮೊದಲ ಬಾರಿಗೆ ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಆರ್.ಚಂದ್ರು ನಿರ್ದೇಶನದ ಚಿತ್ರ ಟ್ರೇಲರ್‍ಗಳ ಮೂಲಕವೇ ಗಮನ ಸೆಳೆದಿದ್ದು 1000ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಹಾಗೂ 3 ರಾಜ್ಯಗಳಲ್ಲಿ ರಿಲೀಸ್ ಆಗುತ್ತಿದೆ.

Kurukshetra Celebrity Show Gallery

Rightbanner02_gimmick_inside

Nanna Prakara Movie Images