` ಡ್ರೀಮ್ ಗರ್ಲ್ ಪ್ರಪೋಸ್‍ಗೆ ನೋ ಎಂದಿದ್ದರು ಕಾರ್ನಾಡ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
karnad had rejected hema malimi's proposal
Girish Karnad, Hema Malini

ಗಿರೀಶ್ ಕಾರ್ನಾಡ್, ಒಬ್ಬ ನಾಟಕಕಾರನಾಗಿ ಅಷ್ಠೇ ಅಲ್ಲ, ನಟನಾಗಿ, ನಿರ್ದೇಶಕನಾಗಿಯೂ ಹೆಸರು ಗಳಿಸಿದ್ದ ಕಲಾವಿದ. ಅವರ ಜೀವನದ ವಿಶೇಷಗಳು ಒಂದೆರಡಲ್ಲ. 81ನೇ ವಯಸ್ಸಿನಲ್ಲೂ ಸೌಂದರ್ಯ ಕಾಪಾಡಿಕೊಂಡಿದ್ದ ಗಿರೀಶ್ ಕಾರ್ನಾಡ್ ಮೇಲೆ ಹೇಮಮಾಲಿನಿ ಅವರಿಗೆ ಪ್ರೀತಿಯಿತ್ತು. ಹೇಮಮಾಲಿನಿ ಅವರ ತಾಯಿ ಗಿರೀಶ್ ಅವರ ಬಳಿ ಪರೋಕ್ಷವಾಗಿ ವಿಷಯ ಪ್ರಸ್ತಾಪಿಸಿದಾಗ ಗಿರೀಶ್ ನೇರವಾಗಿಯೇ ನೋ.. ನೋ.. ನನ್ನನ್ನು ಮದುವೆಯಾಗುವ ಹುಡುಗಿ ಸರಸ್ವತಿ ಅಮೆರಿಕದಲ್ಲಿದ್ದಾರೆ ಎಂದಿದ್ದರು.

ಅಷ್ಟೆ ಅಲ್ಲ, ಗಿರೀಶ್ ಕಾರ್ನಾಡ್, ಸ್ವಲ್ಪ ಎಡಪಂಥೀಯ ಧೋರಣೆ ಹೊಂದಿದ್ದ ಸಾಹಿತಿ. ಆದರೆ, ಅದಕ್ಕೆ ತದ್ವಿರುದ್ಧವೆನ್ನುವಂತೆ ಎಸ್.ಎಲ್.ಭೈರಪ್ಪ ಅವರ ತಬ್ಬಲಿಯು ನೀನಾದ ಮಗನೆ ಕಾದಂಬರಿಯನ್ನು (ಗೋ ಸಂರಕ್ಷಣೆ ಕುರಿತಾದ ಕಥಾವಸ್ತು) ಕನ್ನಡದಲ್ಲಿ ಅದೇ ಹೆಸರಿನಲ್ಲಿ ಹಾಗೂ ಹಿಂದಿಯಲ್ಲಿ ಗೋಧೂಳಿ ಹೆಸರಿನಲ್ಲಿ ಸಿನಿಮಾ ಮಾಡಿದ್ದರು.

ಜ್ಞಾನಪೀಠ ಪುರಸ್ಕøತ ಕುವೆಂಪು ಅವರ ಕಾನೂರು ಹೆಗ್ಗಡತಿ ಕಾದಂಬರಿಗೆ ಸಿನಿಮಾ ರೂಪ ಕೊಟ್ಟಿದ್ದರು. ಅದು ಅವರ ನಿರ್ದೇಶನದ ಕೊನೆಯ ಸಿನಿಮಾ. ಮತ್ತೊಬ್ಬ ಜ್ಞಾನಪೀಠ ಪುರಸ್ಕøತ ಸಾಹಿತಿ ಯು.ಆರ್.ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿಯನ್ನು ಸಿನಿಮಾ ಮಾಡಿದ್ದು ಕೂಡಾ ಗಿರೀಶ್ ಕಾರ್ನಾಡ್.

ಎ.ಕೆ.47ನಲ್ಲಿ ಮಗನನ್ನು ಪ್ರೀತಿಸುವ, ದೇಶವನ್ನು ಗೌರವಿಸುವ ಸ್ವಾಭಿಮಾನಿ ಅಪ್ಪನಾಗಿ ನಟಿಸಿದ್ದರೆ, ಮೈಸೂರು ಮಲ್ಲಿಗೆಯಲ್ಲಿ ಶ್ಯಾನುಭೋಗರ ಪಾತ್ರಕ್ಕೆ ಜೀವ ತುಂಬಿದ್ದರು.

ಹಿಂದಿಯಲ್ಲಿ ಕಾರ್ನಾಡ್ ನಿರ್ದೇಶಿಸಿದ ಇನ್ನೊಂದು ಸಿನಿಮಾ ಉತ್ಸವ್. 

ಆನಂದ ಭೈರವಿ ಭರತನಾಟ್ಯ ಗುರು, ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದ ಗವಾಯಿಗಳ ಗುರು, ಸಂತ ಶಿಶುನಾಳ ಷರೀಫರ ಗುರು.. ಹೀಗೆ ಕಾರ್ನಾಡರು ಗುರುವಿನ ಪಾತ್ರದಲ್ಲಿಯೇ ನಟಿಸಿದ್ದು ಹೆಚ್ಚು. ಟೈಗರ್ ಜಿಂದಾ ಹೈ ಚಿತ್ರದಲ್ಲೂ ಅಷ್ಟೆ, ಗೂಢಚಾರ ಟೈಗರ್‍ನ ಗುರು ಹಾಗೂ ಮೇಲಧಿಕಾರಿಯಾಗಿಯೇ ಕಾರ್ನಾಡ್ ಮಿಂಚಿದ್ದು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery